Sunday, January 25, 2026
Homeಟಾಪ್ ನ್ಯೂಸ್KANTARA : ವರಾಹ ಪಂಜುರ್ಲಿ ನೇಮೋತ್ಸವ : ಹರಕೆ ತೀರಿಸಿದ ಕಾಂತಾರ ಚಿತ್ರತಂಡಕ್ಕೆ ದೈವದ...

KANTARA : ವರಾಹ ಪಂಜುರ್ಲಿ ನೇಮೋತ್ಸವ : ಹರಕೆ ತೀರಿಸಿದ ಕಾಂತಾರ ಚಿತ್ರತಂಡಕ್ಕೆ ದೈವದ ಆಶೀರ್ವಾದ : VIDEO

ಮಂಗಳೂರು: ಕಾಂತಾರ ಚಾಪ್ಟರ್‌ 1 (Kantara) ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್‌ ಶೆಟ್ಟಿ (Rishab Shetty) ಹಾಗೂ ಚಿತ್ರ ತಂಡಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವದಲ್ಲಿ ಭಾಗವಹಿಸಿದ್ದಾರೆ.

ನಟ ರಿಷಬ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ ವತಿಯಿಂದ ಹರಕೆ ನೇಮೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪತ್ನಿ ಹಾಗೂ ಮಕ್ಕಳ ಜೊತೆ ರಿಷಬ್‌ ಶೆಟ್ಟಿ ಪಾಲ್ಗೋಂಡಿದ್ದಾರೆ. ಈ ವೇಳೆ ನಿರ್ಮಾಪಕ ವಿಜಯ್‌ ಕಿರಂಗದೂರು ಸೇರಿದಂತೆ ಕಾಂತಾರ ಚಿತ್ರದ ಅನೇಕರು ಭಾಗಿಯಾಗಿದ್ದರು. ಚಿತ್ರತಂಡದವರು ಗಗ್ಗರ ಸೇವೆ, ಅನ್ನಸಂತರ್ಪಣೆ ಸೇರಿದಂತೆ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೈವಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾಂತಾರ ಚಾಪ್ಟರ್ – 1 ನಂತರ ಮುಂದಿನ ಭಾಗಗಳ ಕುರಿತು ನಿರೀಕ್ಷೆ ಹೆಚ್ಚುತ್ತಿದೆ. ಈ ನೇಮೋತ್ಸವದ ನಂತರ ರಿಷಬ್ ಶೆಟ್ಟಿ ಮತ್ತು ತಂಡ ಮುಂದಿನ ಕಾರ್ಯಗಳಿಗೆ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.

ಕಳೆದ ಏಪ್ರಿಲ್‌ನಲ್ಲಿ ದೈವ ಏನು ಹೇಳಿತ್ತು?

ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದಲ್ಲಿ ನೇಮೋತ್ಸವಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ದೈವದಿಂದ ಕೆಲವು ವಿಶಿಷ್ಟ ಸೂಚನೆಗಳು ದೊರಕಿದ್ದವು.ಕಳೆದ ಬಾರಿ ರಿಷಬ್‌ ಶೆಟ್ಟಿ ಭಾಗಿಯಾಗಿದ್ದಾಗ ಸಿನಿಮಾ, ಸಂಸಾರದಲ್ಲಿ ಎಚ್ಚರಿಕೆಯಿಂದ ಇರುವಂತೆ ದೈವ ನುಡಿದಿತ್ತು. ಸಿನಿಮಾ ಕ್ಷೇತ್ರದಲ್ಲಿ ಶತ್ರುಗಳು ಇರಬಹುದು, ಜಾಗರೂಕತೆಯಿಂದಿರು. ಕಟ್ಟಿಕೊಂಡಿರುವ ಹರಕೆ ಇದ್ದರೆ ತೀರಿಸಿ ಎಂದು ದೈವವು ಆಗ ರಿಷಬ್ ಶೆಟ್ಟಿಗೆ ಹೇಳಿತ್ತು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!