Thursday, March 12, 2026
Homeಟಾಪ್ ನ್ಯೂಸ್BENGALURU: ಮಧ್ಯಪ್ರಾಚ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಸೇಫ್, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಮತ್ತೊಂದು ತಂಡ

BENGALURU: ಮಧ್ಯಪ್ರಾಚ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಸೇಫ್, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಮತ್ತೊಂದು ತಂಡ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ (Middle east) ಉಂಟಾಗಿರುವ ಅಶಾಂತಿಯ ಪರಿಣಾಮವಾಗಿ ಆತಂಕದಲ್ಲಿದ್ದ ಅನಿವಾಸಿ ಕನ್ನಡಿಗರನ್ನು (Kannadigas) ದೇಶಕ್ಕೆ ಕರೆತರುವ ಕಾರ್ಯ ವೇಗ ಪಡೆದುಕೊಂಡಿದೆ. ದುಬೈನಿಂದ (Dubai) ಹೊರಟ ಎಮಿರೇಟ್ಸ್ ಸಂಸ್ಥೆಯ EK-566 ವಿಮಾನವು 350 ಪ್ರಯಾಣಿಕರನ್ನು ಕರೆತಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸುರಕ್ಷಿತವಾಗಿ ಇಳಿಯಿತು.

ಇಂದು (ಮಾ.3) ಮುಂಜಾನೆ ದುಬೈನಿಂದ 490 ಮಂದಿಯನ್ನು ಹೊತ್ತ ಮತ್ತೊಂದು ವಿಮಾನವೂ ಆಗಮಿಸಿತ್ತು. ಮಧ್ಯಾಹ್ನ 3 ಗಂಟೆಗೆ ಹೊರಟ ಈ ಎರಡನೇ ವಿಮಾನ ಸಂಜೆ ವೇಳೆಗೆ ಬೆಂಗಳೂರು ತಲುಪಿತು.

ಇದನ್ನೂ ಓದಿ : ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ- 25 ದಿನಗಳಷ್ಟು ಕಚ್ಚಾ ತೈಲ ಇದೆ: ಕೇಂದ್ರ ಸರ್ಕಾರ

ಆ ಮೂಲಕ 350 ಕನ್ನಡಿಗರು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇನ್ನು ಹಿಂದಿನ ರಾತ್ರಿ ಅಬುಧಾಬಿಯಿಂದ 213 ಮಂದಿ ಆಗಮಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!