Sunday, November 10, 2024
Homeಟಾಪ್ ನ್ಯೂಸ್Kannada rajyotsava : ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಅನುಷ್ಠಾನಕ್ಕೆ ಹಿನ್ನಡೆ - ಸಿಎಂ ರಾಜ್ಯೋತ್ಸವ ಸಂದೇಶ

Kannada rajyotsava : ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಅನುಷ್ಠಾನಕ್ಕೆ ಹಿನ್ನಡೆ – ಸಿಎಂ ರಾಜ್ಯೋತ್ಸವ ಸಂದೇಶ

ಬೆಂಗಳೂರು : ಆಂಗ್ಲಭಾಷೆಯಲ್ಲಿ ಕಲಿತರೆ ಮಾತ್ರ ಬದುಕು ಭವಿಷ್ಯ ಸಾಧ್ಯ ಎಂಬ ಭಾವನೆ ಪಾಲಕ, ಪೋಷಕರಲ್ಲಿ ಇರುವುದು ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.  ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ ಸಂದೇಶ ನೀಡುತ್ತಾ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಸರ್‌ ಎಂ. ವಿಶ್ವೇಶ್ವರಯ್ಯ, ಸಿ.ಎನ್‌.ಆರ್‌. ರಾವ್‌ ವಿಶ್ವವಿಖ್ಯಾತರಾಗಿದ್ದಾರೆ. ನಾನೂ ಸಹ ಕನ್ನಡ ಮಾಧ್ಯಮದಲ್ಲಿ ಕಲಿತು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ ಎಂದರು.

ಶುಕ್ರವಾರ ಈ ಕುರಿತು ಮಾಧ್ಯಮಗಳಲ್ಲಿ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಹುತ್ವ ಸಂಸ್ಕೃತಿ ಇಡೀ ದೇಶಕ್ಕೇ ಮಾದರಿಯಾಗಿದ್ದು ಇಲ್ಲಿನ ಸಾಹಿತ್ಯ, ಪರಂಪರೆ, ಜನಪದ ಇತ್ಯಾದಿಗಳನ್ನು  ದೇಶದುದ್ದಕ್ಕೂ ಹಂಚುವ ಕೈಂಕರ್ಯಕ್ಕೆ ಸರ್ಕಾರ ಮುಂದಾಗಿದ ಎಂದು ತಿಳಿಸಿದರು. ಇಲ್ಲಿನ ಬಹುತ್ವದ ಮಾದರಿಯನ್ನು ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಮಹೋತ್ಸವವನ್ನು ಜನೋತ್ಸವವಾಗಿ ಸರ್ಕಾರ ಆಚರಿಸಲಿದೆ ಎಂದು ಸಿದ್ದರಾಮಯ್ಯ ನುಡಿದರು.

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯು, ಹಚ್ಚಹಸಿರಿನ ನಾಡು ಶರಣರ ಬೀಡಾಗಿರು ನಾಡಿನಲ್ಲಿ ನೆಲೆಸಿದೆ. ಇದುವರೆಗೂ ಸಾವಿರಾರು ಕಲಾವಿದರು, ಕವಿಗಳು, ಶರಣರು, ಅನುಭಾವಿಗಳು, ಸೂಫಿಗಳು, ದಾಸರು ಹಾಗೂ ಜನಪದರಿಂದ ತುಂಬಿತುಳುಕುತ್ತಿದೆ. ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಚನ್ನಬಸಪ್ಪ, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಮುಂತಾದವರ ಪಾತ್ರ ಹಿರಿದು. ಇಂದು ನಮ್ಮ ರಾಜ್ಯ ರಚನೆಯಾದ ಸುದಿನ.

 

ಹೆಚ್ಚಿನ ಸುದ್ದಿ

error: Content is protected !!