ಬೆಂಗಳೂರು : ಕಡ್ಡಾಯವಾಗಿ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿರಬೇಕೆಂಬ ನಿಯಮಗಳಿದ್ದರೂ, ಕನ್ನಡದ ನೆಲದಲ್ಲಿ ಅನ್ಯ ಭಾಷಿಕರು ಕನ್ನಡಕ್ಕೆ ನಿರಂತರ ಅವಮಾನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಕನ್ನಡ ಪರ ಹೋರಾಟಗಾರರು ಇಲ್ಲ ಅಂದ್ರೆ ಕನ್ನಡನಾಡು
ವಲಸಿಗರ ನಾಡು ಆಗುತ್ತದೆ.ಕೃಷ್ಣರಾಜಪುರ ಅಂಬೇಡ್ಕರ್ ಮೈದಾನದಲ್ಲಿ ಸಂಪೂರ್ಣ ತೆಲುಗು ಕಾರ್ಯಕ್ರಮ.
ತೆಲುಗು ಕಾರ್ಯಕ್ರಮ ನಿಲ್ಲಿಸಿದ ಕನ್ನಡ ಪರ ಹೋರಾಟಗಾರರು🟨🟥👏💥 pic.twitter.com/2mEq4rMS5Y
— ಕನ್ನಡಿಗ ದೇವರಾಜ್ (@sgowda79) January 25, 2025
ಕೃಷ್ಣರಾಜಪುರ ಅಂಬೇಡ್ಕರ್ ಮೈದಾನದಲ್ಲಿ ಬೆಂಗಳೂರು ಟಿಡಿಪಿ ಫೋರಂ ಕಾರ್ಯಕ್ರಮದ ಬ್ಯಾನರ್ನಲ್ಲಿ ಕನ್ನಡ ಸಂಪೂರ್ಣ ಮಾಯವಾಗಿದೆ. ತೆಲುಗು ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿರುವ ಬ್ಯಾನರ್ ಅನ್ನು ಆಯೋಜಕರು ಹಾಕುವ ಮೂಲಕ ಕನ್ನಡಕ್ಕೆ ಅವಮಾನಿಸಲಾಗಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಕನ್ನಡ ಪರ ಹೋರಾಟಗಾರರು ಬ್ಯಾನರ್ ತೆರವುಗೊಳಿಸಿ ಕಾರ್ಯಕ್ರಮದ ಆಯೋಜಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ವರ್ಷ ನಮ್ಮವರು ಸಲುಗೆ ಕೊಟ್ಟ ಕಾರಣಕ್ಕೆ ಅವರೆಲ್ಲ ಅತಿರೇಕ ಮಾಡುತ್ತಿದ್ದಾರೆ. ಮಾರತಳ್ಳಿ, ವೈಟ್ ಫೀಲ್ಡ್ ನಲ್ಲಿ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿ ಇಂತಹ ಘಟನೆಗಳು ಮಿತಿ ಮೀರಿ ಹೋಗಿವೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.