Tuesday, November 5, 2024
Homeಟಾಪ್ ನ್ಯೂಸ್ಪ್ರಿಯಾಂಕ ಛೋಪ್ರಾ ದೇಶ ತೊರೆದಿದ್ದು ಯಾಕೆ? : ಕಂಗನಾ ಟ್ವೀಟ್

ಪ್ರಿಯಾಂಕ ಛೋಪ್ರಾ ದೇಶ ತೊರೆದಿದ್ದು ಯಾಕೆ? : ಕಂಗನಾ ಟ್ವೀಟ್

ಮುಂಬಯಿ: ನಟಿ ಪ್ರಿಯಾಂಕಾ ಛೋಪ್ರಾರನ್ನು ಕರಣ್‌ ಜೋಹರ್‌ ಮೂಲೆಗುಂಪು ಮಾಡಿದಕ್ಕೆ ಆಕೆ ಭಾರತ ಬಿಟ್ಟು ಅಮೇರಿಕಾದಲ್ಲಿ ನೆಲೆ ಕಂಡು ಕೊಳ್ಳಬೇಕಾಯಿತು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.

 ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್‌ ತೊರೆಯಬೇಕಾದ ಕಾರಣಗಳನ್ನು ಬಹಿರಂಗಪಡಿಸಿದ ಸುದ್ದಿ ವರದಿಯನ್ನು ಹಂಚಿಕೊಂಡ ನಟಿ ಕಂಗನಾ, ನಟ ಶಾರುಖ್‌ ಖಾನ್‌ ಜೊತೆಗೆ ಹೊಂದಿದ್ದ ʼಗೆಳೆತನʼದ ಕಾರಣಕ್ಕಾಗಿ ನಿರ್ಮಾಪಕ ಕರಣ್‌ ಜೋಹರ್‌ ಪ್ರಿಯಾಂಕರನ್ನು ಬಾಲಿವುಡ್‌ನಿಂದ ʻಬಹಿಷ್ಕರಿಸಿದರುʼ ಎಂಬ ಆರೋಪವನ್ನು ಮಾಡಿದ್ದಾರೆ.

ಕರಣ್‌ ಜೋಹರ್‌ ಅವರು ಪ್ರಿಯಾಂಕ ಅವರಿಗೆ ಅದೆಷ್ಟು ಕಿರುಕುಳ ನೀಡಿದರೆಂದರೆ ಆಕೆ ಕೊನೆಗೆ ಭಾರತ ತೊರೆಯಬೇಕಾಯಿತು ಎಂದು ಸರಣಿ ಟ್ವೀಟ್‌ಗಳಲ್ಲಿ ಕಂಗನಾ ಹೇಳಿಕೊಂಡಿದ್ದಾರೆ.

 ಪ್ರಿಯಾಂಕ ಛೋಪ್ರಾ ವಿರುದ್ಧ ಬಾಲಿವುಡ್‌ ಜನರು ಗುಂಪುಗಟ್ಟಿದರು. ಸ್ವಪರಿಶ್ರಮದಿಂದ ಮೇಲೆ ಬಂದ ಮಹಿಳೆ ಭಾರತ ಬಿಟ್ಟು ತೆರಳುವಂತೆ ಮಾಡಿದರು. ಶಾರುಖ್‌ ಜೊತೆಗಿನ ಒಡನಾಟದ ಕಾರಣ ಕರಣ್‌ ಜೋಹರ್‌ ಆಕೆಯನ್ನು ದೂರ ತಳ್ಳಲು, ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದರು ಎಂದು ಕಂಗನಾ ಆರೋಪಿಸಿದ್ದಾರೆ.

ಅಮಿತಾಭ್‌ ಹಾಗೂ ಶಾರುಖ್‌ ಕಾಲದಲ್ಲಿಯೂ ಚಿತ್ರರಂಗದ ಹೊರಗಿನವರಿಗೆ ಪ್ರತಿಕೂಲವಾದ ವಾತಾವರಣ ಇರಲಿಲ್ಲ, ಅಂತಹ ವಾತಾವರಣ ನಿರ್ಮಿಸಿದಕ್ಕಾಗಿ ಕರಣ್‌ ಮತ್ತು ಆತನ ಪಿಆರ್‌ ತಂಡವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕಂಗನಾ ಕಿಡಿ ಕಾರಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!