Thursday, March 12, 2026
Homeಟಾಪ್ ನ್ಯೂಸ್KAMAL HAASAN: ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ಕಮಲ್‌ ಹಾಸನ್‌ರ 'ಥಗ್ ಲೈಫ್' ಆಡಿಯೋ ಬಿಡುಗಡೆ ಮುಂದೂಡಿಕೆ!

KAMAL HAASAN: ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ಕಮಲ್‌ ಹಾಸನ್‌ರ ‘ಥಗ್ ಲೈಫ್’ ಆಡಿಯೋ ಬಿಡುಗಡೆ ಮುಂದೂಡಿಕೆ!

ಚೆನ್ನೈ: ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ತಮಿಳು ನಟ ಕಮಲ್‌ ಹಾಸನ್‌ ಅವರ ಬಹು ನಿರೀಕ್ಷಿತ ʼಥಗ್‌ ಲೈಫ್‌ʼ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಹೌದು, ಈ ಬಗ್ಗೆ ನಟ ಕಮಲ್‌ ಹಾಸನ್‌ ಸ್ವತಃ ಘೋಷಿಸಿದ್ದಾರೆ. ಮಣಿರತ್ನಂ ನಿರ್ದೇಶನದ, ನಟ ಕಮಲ್‌ ಹಾಸನ್‌ ಸಹ-ಬರೆದಿರುವ ಆಕ್ಷನ್‌ ಡ್ರಾಮಾ ʼಥಗ್‌ ಲೈಫ್‌ʼ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮೇ 16 ರಂದು ಯೋಜಿಸಲಾಗಿತ್ತು. ಆದರೆ ಇದೀಗ ಸಿನಿಮಾ ತಂಡ ಶೀಘ್ರದಲ್ಲೇ ಮೂದೂಡಿದ ದಿನಾಂಕವನ್ನು ಘೋಷಿಸುವುದಾಗಿ ತಿಳಿಸಿದೆ.

ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, “ಕಲೆ ಕಾಯಬಹುದು. ಭಾರತ ಮೊದಲು. ನಮ್ಮ ದೇಶದ ಗಡಿಯಲ್ಲಿನ ಬೆಳವಣಿಗೆಗಳು ಮತ್ತು ಪ್ರಸ್ತುತ ಹೆಚ್ಚಿನ ಎಚ್ಚರಿಕೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇ 16 ರಂದು ಮೂಲತಃ ಯೋಜಿಸಲಾಗಿದ್ದ ಥಗ್ ಲೈಫ್‌ನ ಆಡಿಯೋ ಬಿಡುಗಡೆಯನ್ನು ಮರು ನಿಗದಿಪಡಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿಕೆಯನ್ನು ಹಂಚಿಕೊಂಡಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!