ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ನಿಧನರಾಗಿದ್ದಾರೆ. ಸದಾ ನಗುನಗುತ್ತಿದ್ದ, ಎಲ್ಲರನ್ನೂ ನಗಿಸುತ್ತಿದ್ದ ಜೀವವೊಂದು ಇನ್ನಿಲ್ಲವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಪ್ರದಾಸ್ ಹೆಗಡೆ ಇಂದು ಮುಂಜಾನೆ 4:30ಕ್ಕೆ ಅಸುನೀಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು
ಕಸ್ತೂರಿ ನ್ಯೂಸ್, ಪ್ರಜಾ ಟಿವಿ, ದಿಗ್ವಿಜಯ ವಾಹಿನಿ, ನ್ಯೂಸ್ ಫಸ್ಟ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ರು. ಅವರು ಪ್ರಸ್ತುತ ರಾಜ್ ನ್ಯೂಸ್ ಸುದ್ದಿವಾಹಿನಿಯ ಓಟ್ ಪುಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ರು
ಮಾದ್ಯಮ ಕ್ಷೇತ್ರದಲ್ಲಿ ಅಪಾರ ಸ್ನೇಹಿತರ ಬಳಗವನ್ನೇ ಹೊಂದಿದ್ದ ಪ್ರಸಾದ್ ಹೆಗಡೆ ಅಗಲಿಕೆಗೆ ಮಾದ್ಯಮದ ಗಣ್ಯರು ಕಂಬನಿ ಮಿಡಿದಿದ್ದಾರೆ.