Monday, January 19, 2026
Homeದೇಶಜಾರ್ಖಂಡ್‌ ಸಚಿವ ಜಗರ್ನಾಥ್ ನಿಧನ

ಜಾರ್ಖಂಡ್‌ ಸಚಿವ ಜಗರ್ನಾಥ್ ನಿಧನ

ಚೆನ್ನೈ: ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಾರ್ಖಂಡ್‌ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್‌ ಕಾರಣದಿಂದಾಗಿ 2020ರ ನವೆಂಬರ್‌ನಲ್ಲಿ ಜಗರ್ನಾಥ್‌ ಅವರಿಗೆ ಶ್ವಾಸಕೋಶದ ಕಸಿ ಮಾಡಲಾಗಿತ್ತು. ನಂತರ ಕಾಣಿಸಿಕೊಂಡ ಆರೋಗ್ಯದ ತೊಂದರೆಗಳಿಂದಾಗಿ ಅವರನ್ನು ಕಳೆದ ತಿಂಗಳು ಚೆನ್ನೈಗೆ ಏರ್‌ಲಿಫ್ಟ್‌ ಮಾಡಲಾಗಿತ್ತು.

ಜಗರ್ನಾಥ್‌ ಮಹ್ತೋ ಇಂದು ಕೊನೆಯುಸಿರೆಳೆದರು ಎಂದು ಎಂಜಿಎಂ ಹೆಲ್ತ್‌ಕೇರ್‌ ಡಾ.ಅಪರ್ ಜಿಂದಾಲ್ ತಿಳಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಹತೋ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!