ನವದೆಹಲಿ : ಜಾರ್ಖಂಡ್ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮೊದಲ ಹಂದತದಲ್ಲಿ ಮತದಾನ ಆರಂಭವಾಗಿದ್ದು, ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸಂದೇಶ ನೀಡಿದ್ದಾರೆ.
ಮೊದಲ ಸುತ್ತಿನ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲಾ ಮತದಾರರು ಪೂರ್ಣ ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ, ಮೊದಲ ಬಾರಿಗೆ ಮತ ಚಲಾಯಿಸಲು ಹೊರಟಿರುವ ನನ್ನ ಎಲ್ಲಾ ಯುವ ಆತ್ಮೀಯ ಮತದಾರರಿಗೆ ನಮೋ ಅಭಿನಂದಿಸಿದ್ದಾರೆ.
झारखंड विधानसभा चुनाव में आज पहले दौर की वोटिंग है। सभी मतदाताओं से मेरा आग्रह है कि वे लोकतंत्र के इस उत्सव में पूरे उत्साह के साथ मतदान करें। इस मौके पर पहली बार वोट देने जा रहे अपने सभी युवा साथियों को मेरी बहुत-बहुत बधाई! याद रखें- पहले मतदान, फिर जलपान!
— Narendra Modi (@narendramodi) November 13, 2024
ಅಲ್ಲದೇ ನೆನಪಿಡಿ.. ಮೊದಲು ಮತದಾನ ಮಾಡಿ, ನಂತರ ಉಪಹಾರ ಸೇವಿಸಿ ಎಂಬ ಬದ್ಧತೆಯ ಸಂದೇಶವನ್ನು ಮೋದಿ ಅವರು ಟ್ವೀಟಿಸುವ ಮೂಲಕ ಸಾರಿದ್ದಾರೆ. ಇಂದು ಮೊದಲ ಹಂದತದಲ್ಲಿ 43 ಕ್ಷೇತ್ರಗಳಿಗೆ ವೋಟಿಂಗ್ ಆರಂಭವಾಗಿದೆ. ಜಾರ್ಖಂಡ್‌ನಲ್ಲಿ ಒಟ್ಟು 2.6 ಕೋಟಿ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.