ಭೋಪಾಲ್: ಲೋಕಾಯುಕ್ತ ವಿಶೇಷ ಪೊಲೀಸ್ ಘಟಕ ಭೋಪಾಲ್‌ನಲ್ಲಿ ಜೂನಿಯರ್ ಆಡಿಟರ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ, 90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶ ಪಡಿಸಿಕೊಂಡಿದೆ.
ಭೋಪಾಲ್‌ನ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಜೂನಿಯರ್ ಆಡಿಟರ್ ಆಗಿರುವ ರಮೇಶ್ ಹಿಂಗೋರಾಣಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಸುಮಾರು 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 55 ಲಕ್ಷ ರೂ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಮೇಶ್ ಹಿಂಗೋರಾಣಿಗೆ ಸಂಬಂಧಿಸಿದ 6 ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಸುಮಾರು 13 ಲಕ್ಷ ರೂ. ಮೌಲ್ಯದ ನಗದು ಸಹ ಪತ್ತೆಯಾಗಿದೆ.
ರಮೇಶ್ ಹಿಂಗೋರಾಣಿ ಅವರು ತಮ್ಮ ಆದಾಯಕ್ಕೆ ಮೀರಿದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ನಂತರ ಈ ದಾಳಿ ನಡೆಸಲಾಗಿದೆ. ದೂರಿನ ನಂತರ, ಅವರ ಬಂಗಲೆ, ಎರಡು ಶಾಲೆಗಳು ಮತ್ತು ಅವರ ಮಗನಿಗೆ ಸೇರಿದ ಕಚೇರಿಗಳು ಸೇರಿದಂತೆ 6 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲು ತಂಡಗಳನ್ನು ರಚಿಸಲಾಗಿದೆ.
ಉಳಿದಂತೆ ಲೋಕಾಯುಕ್ತ ಅಧಿಕಾರಿಗಳು ಲಕ್ಷ್ಮಣನಗರದ ರಮೇಶ್ ಅವರ ಬಂಗಲೆಯಿಂದ 4 ಕಾರುಗಳು ಮತ್ತು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು. ಜೊತೆಗೆ ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಮೇಶ್ ಹಿಂಗೋರಾಣಿ ಅವರ ಮಕ್ಕಳಾದ ಯೋಗೇಶ್ ಮತ್ತು ನೀಲೇಶ್ ಅವರೊಂದಿಗೆ ಗಾಂಧಿನಗರ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.