ಕೋಲಾರ: ನೆನ್ನೆ ಮುಳಬಾಗಿಲು ಪಟ್ಟಣದಲ್ಲಿ ನೋಡಿನ ಸರಿಮಳೆಯೇ ಆಗಿದೆ. ಜೆಡಿಎಸ್ ರೋಡ್‌ಶೋ ವೇಳೆ ಕಾರ್ಯಕರ್ತನೊನ್ನ 10, 20, 50 ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾನೆ.
ಸಿಎಂ ಇಬ್ರಾಹಿಂ ನೆನ್ನೆ ಮುಳಬಾಗಿಲಿನ ನೂಗಲಬಂಡೆಯಲ್ಲಿ ರೋಡ್ ಶೋ ನಡೆಸ್ತಿದ್ರು. ಇಲ್ಲಿನ ಅಲ್ಪಂಖ್ಯಾತ ಸಮಾವೇಶಕ್ಕೂ ಮುನ್ನ ಸಿಎಂ ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ರೋಡ್ ಶೋ ನಡೆಸುತ್ತಿದ್ರು. ಈ ವೇಳೆ ಗಾಡಿ ಹತ್ತಿದ್ದ ಕಾರ್ಯಕರ್ತನೊಬ್ಬ ನೋಟಿನ ಕಂತುಗಳನ್ನು ಗಾಳಿಯಲ್ಲಿ ತೂರಿದ್ದಾನೆ. ಇದಕ್ಕೇನಪ್ಪಾ ಕರಣ ಅಂತ ಕೇಳಿದ್ರೆ ನಾಯಕರಿಗೆ ದೃಷ್ಠಿ ಆಗಬಾರದು ಅಂತ ದೃಷ್ಠಿ ನೀವಾಳಿಸಿ ನೋಟ್‌ಗಳನ್ನು ಎಸೆದಿದ್ದಾನೆ ಎನ್ನಲಾಗಿದೆ.