Thursday, March 12, 2026
Homeಟಾಪ್ ನ್ಯೂಸ್JDS: ಸಿದ್ದರಾಮಯ್ಯ ಅಲ್ಲ ಸಾಲರಾಮಯ್ಯ.. ವ್ಯಂಗ್ಯವಾಡಿದ್ದೇಕೆ ಜೆಡಿಎಸ್? ಯಾವ ಸಿಎಂ ಎಷ್ಟು ಸಾಲ ಮಾಡಿದ್ರು?

JDS: ಸಿದ್ದರಾಮಯ್ಯ ಅಲ್ಲ ಸಾಲರಾಮಯ್ಯ.. ವ್ಯಂಗ್ಯವಾಡಿದ್ದೇಕೆ ಜೆಡಿಎಸ್? ಯಾವ ಸಿಎಂ ಎಷ್ಟು ಸಾಲ ಮಾಡಿದ್ರು?

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮಾರ್ಚ್ 6 (ಶುಕ್ರವಾರ) ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಮಂಡಿಸಲಿರುವ 2025-26ರ ಆಯವ್ಯಯದ ಮೇಲೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ರಾಜ್ಯದ ಸಾಲದ ಪ್ರಮಾಣವು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲ 7,64,655 ಕೋಟಿ ರೂಪಾಯಿ ದಾಟಲಿದೆ ಎಂಬ ಅಂಕಿ-ಅಂಶಗಳು ಆತಂಕ ಮೂಡಿಸಿವೆ. 2025-26ರ ಅಂತ್ಯಕ್ಕೆ ಈ ಸಾಲದ ಪರಿಣಾಮ ಜನರ ಮೇಲೆ ಬೀಳಲಿದೆ. ಪ್ರಸಕ್ತ ಆರ್ಥಿಕ ವರ್ಷವೊಂದರಲ್ಲೇ ಸರ್ಕಾರ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಎಂದು ಜೆಡಿಎಸ್ (JDS)​​​ ಎಕ್ಸ್​​​ನಲ್ಲಿ ಬರೆದುಕೊಂಡಿದೆ.

764655 ಕೋಟಿ ತಲುಪಲಿದೆ ಸಾಲ
ಗ್ಯಾರಂಟಿಯಿಂದ ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ, ಕರ್ನಾಟಕದ ಜನರ ತಲೆಯ ಮೇಲೆ ಮತ್ತೊಂದು ಸಾಲದ ಹೊರೆ ಹೊರಿಸುವ ಬಜೆಟ್‌ ಮಂಡಿಸಲು ರೆಡಿಯಾಗಿದ್ದಾರೆ ಜೆಡಿಎಸ್​​​ ಎಕ್ಸ್​​ನಲ್ಲಿ ಉಲ್ಲೇಖಿಸಿದೆ.

ಮುಂದುವರಿದು.. 2025-26 ರ ಅಂತ್ಯಕ್ಕೆ ಕರ್ನಾಟಕ ರಾಜ್ಯದ ಒಟ್ಟು ಸಾಲ 7,64,655 ಕೋಟಿ ರೂ. ದಾಟಲಿದೆ. ವಾರ್ಷಿಕ 50,000 ಕೋಟಿ ರೂ. ಗಳಷ್ಟು ಬಡ್ಡಿ ಪಾವತಿ ಒತ್ತಡ, ಆದಾಯ ಹಾಗೂ ಖರ್ಚಿನ ನಡುವಿನ ಅಂತರ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಕ್ಕಾ ಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ ಎಂದಿದೆ.

ಯಾವ ಸಿಎಂ ಎಷ್ಟು ಸಾಲ ಮಾಡಿದ್ರು?
ಎಸ್‌. ಎಂ ಕೃಷ್ಣ 3,590 ಕೋಟಿ
ಎನ್ ಧರಂಸಿಂಗ್ 15,635 ಕೋಟಿ
ಎಚ್‌ ಡಿ ಕುಮಾರಸ್ವಾಮಿ 3,545 ಕೋಟಿ
ಬಿ ಎಸ್ ಯಡಿಯೂರಪ್ಪ 25,653 ಕೋಟಿ
ಡಿ ವಿ ಸದಾನಂದ ಗೌಡ 9,464 ಕೋಟಿ
ಜಗದೀಶ್ ಶೆಟ್ಟರ್ 13,464 ಕೋಟಿ
ಸಿದ್ದರಾಮಯ್ಯ 5 ಲಕ್ಷ ಕೋಟಿ+
ಒಬ್ಬನ ತಲೆಮೇಲಿನ ಸಾಲ ₹96,229

ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಿಸುತ್ತಾ ಸರ್ಕಾರ?

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇದರ ಮಧ್ಯೆ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಮಾರಾಟ ತೆರಿಗೆ ಅಥವಾ ಸೆಸ್ ವಿಧಿಸಲು ಗಂಭೀರ ಚಿಂತನೆ ನಡೆಸುತ್ತಿದೆಯಂತೆ.

ಮಹತ್ವಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ, ಬೇರೆ ಬೇರೆ ಮೂಲಗಳಿಂದ ಆದಾಯ ಸರಿದೂಗಿಸಲು ಭಾರೀ ಸರ್ಕಸ್‌‍ ನಡೆಸುತ್ತಿದೆ. ಹೀಗಾಗಿಯೇ ಆರ್ಥಿಕವಾಗಿ ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಪಡೆಯದೇ ಉದಾರತೆ ತೋರಿ ಎಂದು ಸಚಿವರು ಪ್ರತಿನಿತ್ಯ ಹೇಳುತ್ತಿದ್ದಾರೆ. ಇದರ ನಡುವೆಯೇ ಗ್ಯಾರಂಟಿಗೆ ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!