ಯಾದಗಿರಿ : ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ತಮ್ಮ ಕಾರ್ಯಕರ್ತರಿಂದ ಹಲ್ಲೆ ಮಾಡಿಸಿದ್ದಾರೆಂದು ಶಾಸಕರ ವಿರುದ್ಧ ಕಿಲ್ಲನಕೇರಾ ಗ್ರಾಮದ ಯುವಕ ಬೀರಲಿಂಗಪ್ಪ ಗಂಭೀರ ಆರೋಪ ಮಾಡಿದ್ದಾನೆ. ಅಲ್ಲದೇ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಪತ್ರವೂ ಬರೆದಿದ್ದಾನೆ.
ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಿಡುಗಡೆಯಾದ ರೂ.3 ಲಕ್ಷದ 98 ಸಾವಿರ ಅನುದಾನಕ್ಕೆ ತಮ್ಮ ಕಾರ್ಯಕರ್ತರಿಂದ ಶಾಸಕ ಕಂದಕೂರ ಗ್ರಾಮಸ್ಥರ ಪೋರ್ಜರಿ ಸಹಿ ಮಾಡಿಸಿ ಬಿಲ್ ಮಾಡದಂತೆ ನಿರ್ಮೀತಿ ಕೇಂದ್ರದ ಅಧಿಕಾರಿಗಳಿಗೆ ತಡೆ ಹಿಡಿದಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನ ಪ್ರಶ್ನಿಸಿದಕ್ಕೆ ಹಲ್ಲೆ ಮಾಡಿಸಿದ್ದಾರೆ. ಅಲ್ಲದೇ ನನ್ನ ವಿರುದ್ಧ ಸುಳ್ಳು ಕೇಸ್ ಸಹ ದಾಖಲಿಸಿದ್ದಾರೆಂದು ಬೀರಲಿಂಗಪ್ಪ ಆರೋಪಿಸಿದ್ದಾನೆ.
ಮುಂದುವರಿದು.. ವಾರ್ತಾ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಕೆಲಸದಿಂದ ತೆಗೆಯುವಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಲಾಖೆ ಅಧಿಕಾರಿಗಳಿಗೆ ಶಾಸಕ ಧಮ್ಮಿ ಹಾಕಿದ್ದಾರೆ. ಕೆಲಸದಿಂದ ನನ್ನನ್ನು ತೆಗೆಸಲು ಹುನ್ನಾರ ನಡೆಸಿದ್ದಾರೆ. ನನಗೆ ಏನಾದರೂ ಹೆಚ್ಚು ಕಮ್ಮಿ ಆದರೆ, ಮಾನಸಿಕ ಹಿಂಸೆ ನೀಡಿ-ಮುಂದೆ ನನ್ನ ಸಾವಾದರೆ, ಅದಕ್ಕೆ ಶಾಸಕರೇ ಕಾರಣ ಅಂತಾ ಬೀರಪ್ಪ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.