ಹಾಸನ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆಪ್ತ ಮಾಜಿ ಎಂಎಲ್‌ಸಿ ಪಾಟೀಲ್ ಶಿವರಾಂ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
75 ವರ್ಷದ ಪಾಟೀಲ್ ಶಿವರಾಂ ಸುಮಾರು ನಾಲ್ಕು ದಶಕಗಳ ಕಾಲ ಜೆಡಿಎಸ್ ನಲ್ಲಿ ಸಕ್ರಿಯ ರಾಜಕಾರಣಿದ್ದಲ್ಲದೆ, ಹಾಸನದ ಪ್ರಭಾವಿ ಮುಖಂಡರಾಗಿ ಕೂಡ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ . 2010-2016 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಅವರು ಸೇವೆಸಲ್ಲಿಸಿದ್ದರು.
ಅಲ್ಲದೇ ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಇನ್ನು ಪಟೇಲ್ ಶಿವರಾಂ ಅವರ ನಿಧನಕ್ಕೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.
ಸರಳರು, ಸಜ್ಜನರು, ನಮ್ಮ ತಂದೆ ಹೆಚ್.ಡಿ.ದೇವೇಗೌಡ ಅವರ ಆತ್ಮೀಯರೂ ಆಗಿದ್ದ ಹಿರಿಯರಾದ ಪಟೇಲ್ ಶಿವರಾಂ ಅಗಲಿಕೆ ಅತೀವ ದುಃಖ ತಂದಿದೆ. ನಮ್ಮ ಪಕ್ಷದಲ್ಲಿ ಹಲವು ದಶಕಗಳ ಸೇವೆ ಸಲ್ಲಿಸಿದ್ದ ಶಿವರಾಂ ಅವರು ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಸಂಘಟನೆಗೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ದುಡಿದಿದ್ದರು ಎಂದು ಸಚಿವರು ಹೇಳಿದ್ದಾರೆ.