Thursday, April 16, 2026
Homeಟಾಪ್ ನ್ಯೂಸ್Jaya Bachchan: ಅಮಿತಾಭ್‌ ಹೆಸರು ಸೇರಿಸಿದ್ದಕ್ಕೆ ಜಯಾ ಬಚ್ಚನ್‌ ಗರಂ! : VIDEO

Jaya Bachchan: ಅಮಿತಾಭ್‌ ಹೆಸರು ಸೇರಿಸಿದ್ದಕ್ಕೆ ಜಯಾ ಬಚ್ಚನ್‌ ಗರಂ! : VIDEO

ನವದೆಹಲಿ: ಕಲಾಪದ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಅವರು ಜಯಾ ಅಮಿತಾಭ್ ಬಚ್ಚನ್ ಎಂದು ಕರೆದಿದ್ದಕ್ಕೆ ಜಯಾ ಬಚ್ಚನ್‌ (Jaya Bachchan) ಗರಂ ಆಗಿರುವ ಘಟನೆ ನಡೆದಿದೆ.

ಕಲಾಪದ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಜಯಾ ಬಚ್ಚನ್‌ ಅವರನ್ನು ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ಜೀ ಎಂದು ಸಂಬೋಧಿಸಿದ್ದರು. ಇದಕ್ಕೆ ಗರಂ ಆದ ಜಯಾ ಬಚ್ಚನ್‌ ಅವರು, ಜಯಾ ಬಚ್ಚನ್ ಎಂದು ಕರೆದರೆ ಸಾಕು ಎಂದಿದ್ದಾರೆ.

ಅದಾದ ಬಳಿಕ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರು, ಪಾರ್ಲಿಮೆಂಟ್ ರೆಕಾರ್ಡ್​ನಲ್ಲಿ ಜಯಾ ಅಮಿತಾಭ್ ಬಚ್ಚನ್ ಎಂದು ಇದೆ. ಇಲ್ಲಿ ನಿಮ್ಮ ಪೂರ್ತಿ ಹೆಸರು ಬರೆದಿದೆ. ಅದನ್ನೇ ನಾನು ಕರೆದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಅವರಿಗೆ ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳಿಲ್ಲ ಎಂದು ಜಯಾ ಬೇಸರ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿ

Change Language »
error: Content is protected !!