Thursday, April 16, 2026
Homeಟಾಪ್ ನ್ಯೂಸ್JAYA BACHCHAN: ಮತ್ತೆ ಪಾಪರಾಜಿಗಳನ್ನ ತರಾಟೆಗೆ ತೆಗೆದುಕೊಂಡ ಜಯಾ ಬಚ್ಚನ್‌, ಬಾಯಿಮುಚ್ಚಿಕೊಂಡು ಫೋಟೋ ತೆಗೆಯಿರಿ ಎಂದ...

JAYA BACHCHAN: ಮತ್ತೆ ಪಾಪರಾಜಿಗಳನ್ನ ತರಾಟೆಗೆ ತೆಗೆದುಕೊಂಡ ಜಯಾ ಬಚ್ಚನ್‌, ಬಾಯಿಮುಚ್ಚಿಕೊಂಡು ಫೋಟೋ ತೆಗೆಯಿರಿ ಎಂದ ನಟಿ

ಮುಂಬೈ: ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್‌ ಹಾಗೂ ಪಾಪರಾಜಿಗಳ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಒಂದು ರೀತಿಯಲ್ಲಿ ಇಬ್ಬರದ್ದು ಎಣ್ಣೆ ಸೀಗೇಕಾಯಿ ಸಂಬಂಧ ಆಗಿದೆ. ಆಗಾಗ ಜಯಾ ಬಚ್ಚನ್‌ (Jaya Bachchan) ಪಾಪರಾಜಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದೀಗ ಅದೇ ರೀತಿಯ ಘಟನೆ ಮತ್ತೆ ನಡೆದಿದ್ದು, ನಟಿ ಜಯಾ ಬಚ್ಚನ್‌ ಪಾಪರಾಜಿಗಳ ವಿರುದ್ಧ ಮತ್ತೆ ಕೆಂಡಮಂಡಲವಾಗಿದ್ದಾರೆ. ಅದರ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಫೋಟೋ ತೆಗೆಯೋದು ಮಾತ್ರ ನಿಮ್ಮ ಕೆಲಸ
ಮೊದಲಿನಿಂದಲೂ ಜಯಾ ಬಚ್ಚನ್ ತಮ್ಮ ನೇರ ನುಡಿಗಳಿಗೆ ಪ್ರಸಿದ್ದ. ಅದರಲ್ಲೂ ಪಾಪರಾಜಿಗಳ ಜೊತೆ ಅವರ ಸಂಬಂಧದ ಬಗ್ಗೆ ಅನೇಕ ಬಾರಿ ಅವರು ಟ್ರೋಲ್‌ ಆಗಿದ್ದಾರೆ. ಅವರು ತುಂಬಾ ಅತಿಯಾಗಿ ಹಾಗೂ ಅಹಂಕಾರದಿಂದ ವರ್ತನೆ ಮಾಡುತ್ತಾರೆ ಎಂದು ಪಾಪರಾಜಿಗಳು ಹೇಳಿದ್ದಾರೆ. ಇದೀಗ, ನವೆಂಬರ್ 13 ರ ಬುಧವಾರ ಸಂಜೆ ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಪರಾಜಿಗಳ ದೊಡ್ಡ ಗ್ರೂಪ್‌ವೊಂದು ಫೋಟೋ ಹಾಗೂ ವಿಡಿಯೋಗಳನ್ನ ತೆಗೆಯುತ್ತಾ ನಿಂತಿದ್ದರು. ಒಂದಿಷ್ಟು ಜನರು ಇದ್ದಾಗ ಗಲಾಟೆ ಆಗುವುದು ಸಾಮಾನ್ಯ. ಅದರಲ್ಲೂ ಪಾಪರಾಜಿಗಳು ಎಲ್ಲರ ಹೆಸರನ್ನ ಕರೆಯುತ್ತಿರುತ್ತಾರೆ. ಅದರ ಜೊತೆಗೆ ಕೆಲವೊಂದು ಬಾರಿ ಎಲ್ಲರ ಬಗ್ಗೆ ಕಮೆಂಟ್‌ ಸಹ ಮಾಡುತ್ತಿರುತ್ತಾರೆ. ಅದೇ ರೀತಿ ಪಾಪರಾಜಿಗಳು ಸಹ ಜಯಾ ಅವರ ಮುಂದೆ ಮಾಡಿದ್ದು, ನಟಿ ಎಲ್ಲರನ್ನ ಸರಿಯಾಗಿ ಜಾಡಿಸಿದ್ದಾರೆ.

ಹೌದು, ಮುಂಬೈನ ಈ ಕಾರ್ಯಕ್ರಮಕ್ಕೆ ಹಿರಿಯ ನಟಿ ಜಯಾ ಬಚ್ಚನ್ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಅವರೊಂದಿಗೆ ಬಂದಿದ್ದರು. ಈ ಸಮಯದಲ್ಲಿ ಪಾಪರಾಜಿಗಳಿಗೆ ನೀವು ಬಾಯಿ ಮುಚ್ಚಿಕೊಂಡು ಫೋಟೋ ತೆಗೆಯಿರಿ. ಸುಮ್ಮನೆ ನಾಟಕ ಮಾಡಬೇಡಿ. ಫೋಟೋ ತೆಗೆಯುವುದು ಮಾತ್ರ ನಿಮ್ಮ ಕೆಲಸ. ಅದನ್ನ ಬಿಟ್ಟು ಕಮೆಂಟ್‌ ಮಾಡುತ್ತಿರುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದು, ಅವರ ಈ ಪ್ರತಿಕ್ರಿಯೆಯು ಸಾರ್ವಜನಿಕ ಸ್ಥಳಗಳಲ್ಲಿ ಗೌಪ್ಯತೆಯ ಬಗ್ಗೆ ಸೆಲೆಬ್ರಿಟಿಗಳು ಎದುರಿಸುತ್ತಿರುವ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಜಯಾ ಬಚ್ಚನ್‌ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಪಾಪರಾಜಿಗಳು

ಇನ್ನು ಜಯಾ ಬಚ್ಚನ್‌ ಈ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿ, ಮಾಸ್ಕ್‌ ಧರಿಸಿಕೊಂಡು ಬಂದಿದ್ದರು. ಅಲ್ಲಿ ಪಾಪರಾಜಿಗಳ ಗದ್ದಲ ಜಾಸ್ತಿ ಆದಾಗ ಅವರ ಮೇಲೆ ಎಗರಾಡಿದ್ದು, ಯಾವಾಗ ಎಲ್ಲರ ಗಮನ ಅವರ ಕಡೆ ಸೆಳೆಯಿತೋ ಆಗ ಶ್ವೇತಾ ಬಚ್ಚನ್‌ ಅವರನ್ನ ಒಳಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ಕಾರ್ಯಕ್ರಮದಿಂದ ವಾಪಾಸ್‌ ಹೋಗುವಾಗ ಸಹ ನಟಿ ಪಾಪರಾಜಿಗಳ ಮೇಲೆ ತಮ್ಮ ಸಿಟ್ಟನ್ನ ತೋರಿಸಿದ್ದಾರೆ. ಆದರೆ ಜಯಾ ಬಚ್ಚನ್‌ ಅವರ ಈ ನಡೆಗೆ ಅನೇಕ ಜನರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಜಯಾ ಬಚ್ಚನ್‌ ಅವರ ನಡೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದ್ದು, ಅಮಿತಾಬ್‌ ಬಚ್ಚನ್‌ ಇವರ ಜೊತೆ ಹೇಗಪ್ಪ ಇರುತ್ತಾರೆ ಎಂದೆಲ್ಲಾ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ‌ʼಟಾಯ್ಲೆಟ್‌ʼ ಸಿನಿಮಾ ಟೈಟಲ್ ವ್ಯಂಗ್ಯವಾಡಿದ ಜಯಾ ಬಚ್ಚನ್‌ಗೆ ನಟ ಅಕ್ಷಯ್‌ ಕುಮಾರ್‌ ತಿರುಗೇಟು

ಹೆಚ್ಚಿನ ಸುದ್ದಿ

Change Language »
error: Content is protected !!