ಬಳ್ಳಾರಿ : ಬಳ್ಳಾರಿ (Bellary ) ಫೈರಿಂಗ್ ಕೇಸ್ ನಲ್ಲಿ ರಾಜಕೀಯ (politics) ನಾಯಕರ ಸಂಘರ್ಷ ಕೊಂಚ ಕಡಿಮೆಯಾಗಿದ್ದು, ಆದ್ರೆ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ್ಲೇ ಶಾಸಕ ಜನಾರ್ದನ ರೆಡ್ಡಿ (Janardhan reddy )ಹೊಸ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಪೋಸ್ಟರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪೊಲೀಸರು ಮತ್ತು ಕಾಂಗ್ರೆಸ್ ಶಾಸಕರ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸದೆ ಹಿಂಬರಹ ನೀಡಿರುವುದಕ್ಕೆ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 1ರಂದು ತಮ್ಮ ನಿವಾಸದ ಬಳಿ ಬ್ಯಾನರ್ ಹಾಕುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ರೆಡ್ಡಿ ಆರೋಪಿಸಿದ್ದರು.
ಜನವರಿ 6ರಂದು ಮೂವರ ವಿರುದ್ಧ ನೀಡಿದ ದೂರಿಗೆ ಪೊಲೀಸರು FIR ದಾಖಲಿಸದೇ ಹಿಂಬರಹ ನೀಡಿರುವುದಕ್ಕೆ ರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಾನು ನೀಡಿದ ದೂರು ಬೇರೆ, ಪೊಲೀಸರು ಕೊಟ್ಟ ಹಿಂಬರಹವೇ ಬೇರೆಯಾಗಿದೆ. ಸ್ಪಷ್ಟವಾಗಿ ಆರೋಪಿಗಳ ವಿರುದ್ಧ ಕೇಸ್ ಮಾಡಬೇಕಾದರೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೆಡ್ಡಿ ಕಿಡಿಕಾರಿದ್ದಾರೆ.
ಶಾಸಕ ಭರತ್ ರೆಡ್ಡಿ ಹಾಗೂ ಶಾಸಕ ಜನಾರ್ದನ ರೆಡ್ಡಿ ಕುಟುಂಬದ ನಡುವೆ ಸಂಘರ್ಷ ಏರ್ಪಟ್ಟು ಗುಂಡಿನ ದಾಳಿ ನಡೆದಿತ್ತು. ಪರಿಣಾಮ ರಾಜಶೇಖರ್ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದರು. ಇದು ರಾಜಕೀಯ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು.
ಇದನ್ನೂ ಓದಿ : ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವದಂತಿ – ನೋ ವೇ ಎಂದ ಸತೀಶ್ ಜಾರಕಿಹೊಳಿ!