ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಫುಡ್ ಪಾಯಿಸನ್ ಆದ ಹಿನ್ನಲೆ ಸೌತ್ ಮುಂಬೈನ HN ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಚೆನ್ನೈಗೆ ತೆರಳಿದ್ದ ನಟಿ ಜಾನ್ವಿಗೆ ಅಲ್ಲಿಂದ ಮಂಗಳವಾರ ವಾಪಾಸ್ ಆಗಿದ್ದು ಈ ವೇಳೆ ವಿಮಾನ ನಿಲ್ದಾಣದಲ್ಲಿ ಆಹಾರ ಸೇವಿದ್ದಾರೆ. ಮನೆಗೆ ಬಂದ ನಂತರ ಜಾಹ್ನವಿಯ ಆರೋಗ್ಯ ಹದಗೆಟ್ಟಿದೆ.
ಬುಧವಾರ ಮನೆಯಲ್ಲಿದ್ದ ಅವರಿಗೆ ಅನಾರೋಗ್ಯ ಹಾಗೂ ವೀಕ್ ನೆಸ್ ಆಗಿದ್ದು ವೈದ್ಯರ ಸಲಹೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜಾಹ್ನವಿ ಸ್ಥಿತಿ ಉತ್ತಮವಾಗಿದ್ದು ಶುಕ್ರವಾರದ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಾಹ್ನವಿ ಕಪೂರ್ ನಟನೆಯ ಮುಂದಿನ ಸಿನಿಮಾ ಉಲಾಜ್ ಇದೇ ಆಗಸ್ಟ್ 2ರಂದು ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡವು ಉಲಾಜ್ ಸಿನಿಮಾದ 2 ನಿಮಿಷಗಳ ಟ್ರೇಲರ್ ಬಿಡುಗಡೆ ಮಾಡಿದೆ. ಗೂಢಚಾರಿಕೆ ಮತ್ತು ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪ ಹೊತ್ತಿರುವ ಶಂಕಿತ ಯುವ ಅಧಿಕಾರಿಯ ಪಾತ್ರದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆ.