Sunday, November 10, 2024
Homeಟಾಪ್ ನ್ಯೂಸ್113 ಕೋಟಿ ರೂ. ಪಾವತಿಸಲು ಯುವಕನಿಗೆ ಐಟಿ ನೋಟಿಸ್!

113 ಕೋಟಿ ರೂ. ಪಾವತಿಸಲು ಯುವಕನಿಗೆ ಐಟಿ ನೋಟಿಸ್!

ನವದೆಹಲಿ: ತಿಂಗಳಿಗೆ 58 ಸಾವಿರ ರೂಪಾಯಿ ವೇತನ ಪಡೆಯುವ ಯುವಕನೊಬ್ಬನಿಗೆ ಆದಾಯ ತೆರಿಗೆ ಇಲಾಖೆಯು 113 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. 2011–12ರಲ್ಲಿ ಈ ಯುವಕನ ಖಾತೆಯಿಂದ 132 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ.

2020ರಲ್ಲಿ ಯುವಕ ರವಿ ಗುಪ್ತಾಗೆ ಇದೇ ರೀತಿಯ ನೋಟಿಸ್ ನೀಡಿದ್ದು, ಭಾರೀ ಸುದ್ದಿಯಾಗಿ, ಪ್ರಧಾನಮಂತ್ರಿ ಕಚೇರಿಯೇ ಮಧ್ಯಪ್ರವೇಶಿಸಿ ತನಿಖೆ ನಡೆಸಿತ್ತು.

ಈ ಬಗ್ಗೆ ಗುಪ್ತಾ ಅವರು ಇಡಿ ಮತ್ತು ಸಿಬಿಐಗೆ ದೂರು ಸಲ್ಲಿಸಿದ್ದಾರೆ. ಆದರೆ ಈ ರೀತಿಯ ಹಲವು ಘಟನೆಗಳು ನಡೆದರೂ ಸಿಬಿಐ , ಈಡಿ ಯಾಕೆ ಗಮನಹರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದಾಗ ಗುಪ್ತಾ ಆಘಾತಕ್ಕೊಳಗಾಗಿದ್ದರು., 2011-12 ರ ಆರ್ಥಿಕ ವರ್ಷಕ್ಕೆ 3.49 ಕೋಟಿ ರೂ. ದಂಡ ಪಾವತಿಸಬೇಕೆಂದು ಅವರಿಗೆ ಹೇಳಲಾಗಿತ್ತು. ವಿಶೇಷ ಏನಂದ್ರೆ ಆಗ ಇಂದೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಗುಪ್ತಾ ಅವರ ಸಂಬಳ ತಿಂಗಳಿಗೆ ಕೇವಲ 7,000 ರೂಪಾಯಿ.

’ಈ ವಿವಾದದಿಂದ ನನ್ನ ಹೆಸರನ್ನು ಕೈಬಿಡುವಂತೆ ಯತ್ನಿಸುತ್ತಾ 5 ವರ್ಷಗಳಿಂದ ಕೇಂದ್ರ ಏಜೆನ್ಸಿಗಳನ್ನು ಸಂಪರ್ಕಿಸುತ್ತಿದ್ದೇನೆ.. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ನನಗೆ ಮಾನಸಿಕ ಕಿರುಕುಳವಾಗುತ್ತಿದೆ’ ಎಂದು ಗುಪ್ತಾ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!