ಉತ್ತರ ಪ್ರದೇಶ : ವಿಶ್ವದ ಅತೀ ದೊಡ್ಡ ಹಿಂದೂ ಧಾರ್ಮಿಕ ಉತ್ಸವ… ಮಹಾ ಕುಂಭಮೇಳವು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದ್ದು, ಫೆ.26 ರವರೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯದ ವೈಭವ ಮುಂದುವರಿಯಲಿದೆ.
ಇನ್ನು ಮೊದಲ ಬಾರಿಗೆ, ISRO (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಬಾಹ್ಯಾಕಾಶದಿಂದ ಮಹಾ ಕುಂಭಮೇಳದ ಚಿತ್ರಗಳನ್ನು ಶೇರ್ ಮಾಡಿದೆ. ತ್ರಿವೇಣಿ ಸಂಗಮದಲ್ಲಿ ನೆರೆದಿದ್ದ ಬೃಹತ್ ಜನಸಮೂಹದ ಚಿತ್ರಗಳನ್ನು ಕಾರ್ಟೊಸ್ಯಾಟ್-2 ಉಪಗ್ರಹ ಸೆರೆ ಹಿಡಿದಿದ್ದು, ಇಸ್ರೋ ಇದನ್ನು ಹಂಚಿಕೊಂಡಿದೆ. ಈ ಚಿತ್ರಗಳು ಎಲ್ಲೆಡೆ ವೈರಲ್ ಆಗಿವೆ. ಅದ್ಭುತ ಚಿತ್ರಗಳನ್ನು ಹಲವರು ಶೇರ್ ಮಾಡುತ್ತಿದ್ದಾರೆ.
Maha Kumbh Tent City, Prayagraj, India as viewed by EOS-04 (RISAT-1A) satellite. 🛰️#MahaKumbh2025 #ISRO pic.twitter.com/J9nT6leYIJ
— ISRO InSight (@ISROSight) January 22, 2025
ಮಹಾಕುಂಭ ಮೇಳ 2025ರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. 144 ವರ್ಷಗಳ ನಂತರ ಮಹಾಕುಂಭ ಮೇಳವು ನಡೆಯುತ್ತಿದ್ದು, ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ. ವಿದೇಶಗಳಿಂದಲೂ ಪ್ರಯಾಗರಾಜ್ ನತ್ತ ಭಕ್ತರನ್ನು ಆಕರ್ಷಿಸಿದೆ.