ಶ್ರೀಹರಿಕೋಟಾ: ಒನ್ ವೆಬ್ ಇಂಡಿಯಾ -2 ಮಿಷನ್‍ನ ಭಾಗವಾಗಿ ಇಂದು ಬ್ರಿಟನ್‌ನ 36 ಉಪಗ್ರಹಗಳನ್ನು ಹೊತ್ತ ಇಸ್ರೋದ LVM-3 ರಾಕೆಟ್ ಉಡಾವಣೆಯಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್ ಅನ್ನು ಇಸ್ರೋ ಹಾರಿಸಿದೆ. ಬ್ರಿಟನ್ ಮೂಲದ ಒನ್‍ವೆಬ್ ಸಮೂಹಕ್ಕೆ ಸೇರಿದ ಉಪಗ್ರಹಗಳನ್ನು ಹೊತ್ತ ಇಸ್ರೋದ ಲಾಂಚ್ ವೆಹಿಕಲ್ ಮಾರ್ಕ್– 3 ಉಡಾವಣಾ ನೌಕೆ ನಭಕ್ಕೆ ಹಾರಿತು. ಅತ್ಯಂತ ಭಾರವಾದ ಅಂದ್ರೆ 5,805 ಕೆಜಿ ತೂಕದ 36 ಉಪಾಗ್ರಹಗಳನ್ನು ಈ ರಾಕೆಟ್ ಭೂ ಕಕ್ಷೆಗೆ ಸೇರಿಸಿದೆ
ಇಸ್ರೋ ಕೈಗೊಂಡ ಈ ವರ್ಷದ ಎರಡನೇ ಯಶಸ್ವಿ ಉಡಾವಣೆ ಇದಾಗಿದ್ದು, ಒನ್ ವೆಬ್ ಇಂಡಿಯಾ -2 ಮಿಷನ್ ಭಾರತದಿಂದ ಉಡಾವಣೆ ಮಾಡುತ್ತಿರುವ ಎರಡನೇ ಉಪಗ್ರಹ ಇದಾಗಿದೆ. ಮೊದಲ ಬಾರಿ 2022ರ ಅಕ್ಟೋಬರ್ 23ರಂದು ಇಸ್ರೋನ 36 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಬ್ರಿಟನ್ ಮತ್ತು ಭಾರತೀಯ ಬಾಹ್ಯಾಕಾಶ ಉದ್ಯಮಗಳ ನಡುವಿನ ಸಹಯೋಗಕ್ಕೆ ಇದು ಮಾದರಿಯಾದ್ದು, ಯಶಸ್ವಿ ಉಡಾವಣೆಗಾಗಿ ಇಸ್ರೋ ಹಾಗೂ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ಒನ್ ವೆಬ್ ಧನ್ಯವಾದಗಳನ್ನು ತಿಳಿಸಿದೆ.