Saturday, March 15, 2025
Homeಟಾಪ್ ನ್ಯೂಸ್ISRO: ಇಸ್ರೋದಿಂದ 393 ವಿದೇಶಿ ಉಪಗ್ರಹಗಳ ಉಡಾವಣೆ-143 ಮಿಲಿಯನ್ ಡಾಲರ್ ಆದಾಯ ಗಳಿಸಿದ ಭಾರತ!

ISRO: ಇಸ್ರೋದಿಂದ 393 ವಿದೇಶಿ ಉಪಗ್ರಹಗಳ ಉಡಾವಣೆ-143 ಮಿಲಿಯನ್ ಡಾಲರ್ ಆದಾಯ ಗಳಿಸಿದ ಭಾರತ!

ನವದೆಹಲಿ: ಭಾರತವು 2015 ರಿಂದ 2024ರ ಅವಧಿಯಲ್ಲಿ ಹಲವಾರು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ 143 ಮಿಲಿಯನ್ ಡಾಲರ್ ವಿದೇಶಿ ವಿನಿಮಯ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಈ ಮಾಹಿತಿಯನ್ನು ಬಾಹ್ಯಾಕಾಶ ಇಲಾಖೆಯ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ತಿಳಿಸಿದ್ದಾರೆ.

2015 ರಿಂದ ಡಿಸೆಂಬರ್ 2024 ರವರೆಗಿನ ಹತ್ತು ವರ್ಷಗಳಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಪಿಎಸ್‌ಎಲ್‌ವಿ, ಎಲ್‌ವಿಎಂ 3 ಮತ್ತು ಎಸ್‌ಎಸ್‌ಎಲ್‌ವಿ ಉಡಾವಣಾ ವಾಹನಗಳ ಮೂಲಕ ಒಟ್ಟು 393 ವಿದೇಶಿ ಉಪಗ್ರಹಗಳು ಮತ್ತು ಮೂರು ಭಾರತೀಯ ಗ್ರಾಹಕ ಉಪಗ್ರಹಗಳನ್ನು ವಾಣಿಜ್ಯ ಆಧಾರದ ಮೇಲೆ ಉಡಾವಣೆ ಮಾಡಿದೆ ಎಂದು ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

2014 ರಿಂದ ಇಲ್ಲಿಯವರೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ 34 ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಒಟ್ಟು 393 ವಿದೇಶಿ ಉಪಗ್ರಹಗಳಲ್ಲಿ 232 ಅಮೆರಿಕದ್ದಾಗಿದ್ದರೆ, 83 ಯುನೈಟೆಡ್ ಕಿಂಗ್‌ಡಮ್‌ಗೆ ಸೇರಿವೆ. ಈ ಮೂಲಕ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಗಣನೀಯ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!