ಟೆಲ್ ಅವೀವ್: ಇಸ್ರೇಲ್ ಮತ್ತು ಗಾಜಾ ನಡುವೆ ಕಳೆದ 15 ತಿಂಗಳಿಂದ ನಿರಂತರವಾಗಿ ಯುದ್ಧ ನಡೆಯುತ್ತಿದೆ. ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ದಾಳಿ ಮಾಡಿ ಹಿಂಸಾಚಾರ ನಡೆಸಿದ್ದರು ಎಂಬ ಆರೋಪ ಹಿನ್ನೆಲೆ 2023ರ ಅಕ್ಟೋಬರ್ 7 ರಂದು ಈ ಯುದ್ಧ ಆರಂಭವಾಗಿತ್ತು. ಕೆಲವು ದಿನಗಳ ಹಿಂದೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದರೂ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
2023ರ ಅಕ್ಟೋಬರ್ 7 ರಂದು ಸಾವಿರಾರು ರಾಕೆಟ್ ಉಡಾಯಿಸಿ, ಇಸ್ರೇಲ್ ದೇಶದ ಒಳಗೆ ಹಮಾಸ್ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದ ಆರೋಪ ಇದೆ. ಹಾಗೂ ಈ ಸಮಯದಲ್ಲಿ ಇಸ್ರೇಲ್ ಒಳಗೆ ನುಗ್ಗಿದ್ದ ಹಮಾಸ್ ಬಂಡುಕೋರರು, ನೂರಾರು ಇಸ್ರೇಲ್ ಜನರನ್ನು ಒತ್ತೆಯಾಳುಗಳ ರೂಪದಲ್ಲಿ ಕರೆದುಕೊಂಡು ಹೋಗಿದ್ದರು. ಈಗ ಇದೇ ಕಾರಣಕ್ಕೆ ಕದನ ವಿರಾಮ ಒಪ್ಪಂದಕ್ಕೆ ಬ್ರೇಕ್ ಬೀಳುವ ಸಾಧ್ಯತೆಯೂ ದಟ್ಟವಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈಗ ಕದನ ವಿರಾಮಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಒತ್ತೆಯಾಳುಗಳ ಪಟ್ಟಿಯನ್ನು ಹಮಾಸ್ ನೀಡುವ ತನಕ, ಕದನ ವಿರಾಮ ಘೋಷಣೆ ಸಾಧ್ಯವಿಲ್ಲ ಎಂದು ನೆತನ್ಯಾಹು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕೊನೇ ಕ್ಷಣದಲ್ಲಿ ಇಸ್ರೇಲ್ & ಗಾಜಾ ಕದನ ವಿರಾಮ ಒಪ್ಪಂದಕ್ಕೆ ಟ್ವಿಸ್ಟ್ ಸಿಕ್ಕಿದೆ.