Sunday, January 25, 2026
Homeಕ್ರೀಡೆISHANT SHARMA : ಹನುಮನ ಹುಟ್ಟೂರಿಗೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ

ISHANT SHARMA : ಹನುಮನ ಹುಟ್ಟೂರಿಗೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ

ಕೊಪ್ಪಳ : ಕರ್ನಾಟಕದ (Karnataka) ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಬೆಟ್ಟಕ್ಕೆ (Anjanadri hill) ಖ್ಯಾತ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ ನೀಡಿದ್ದಾರೆ.

ಶುಕ್ರವಾರ ಕ್ಷೇತ್ರಕ್ಕೆ ಆಗಮಿಸಿದ ಇಶಾಂತ್ ವಿಶೇಷ ಪೂಜೆ ಸಲ್ಲಿಸಿದರು. ಆಂಜನೇಯನ ಮುಂದೆ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಮ್ಮ ಗೆಳೆಯನ ಜೊತೆಗೆ ಬಂದಿದ್ದ ಇಶಾಂತ್ ಶರ್ಮಾ ಅವರು 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಬೆಟ್ಟದ ಮೇಲಿಂದ ಹಂಪಿಯ ಸೌಂದರ್ಯ ಹಾಗೂ ಬೆಟ್ಟಗಳ ಸಾಲುಗಳ ಪರಿಸರವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು.

ಅಭಿಮಾನಿಗಳು ಸಹ ಇಶಾಂತ್ ಶರ್ಮಾ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಯಾವುದೇ ಭದ್ರತೆಯಿಲ್ಲದೆ ಸಾಮಾನ್ಯನ ರೀತಿಯಲ್ಲಿ ದೇಗುಲಕ್ಕೆ ಬಂದಿದ್ದ ಇಶಾಂತ್ ಅರ್ಧಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಕಳೆದರು.

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿರೋ ಇಶಾಂತ್ ತನ್ನ ಅದ್ಭುತ ಬೌಲಿಂಗ್ ಮೂಲಕ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಸದ್ಯ ತಂಡದಿಂದ ದೂರ ಇದ್ದಾರೆ. ದೇಸಿ ಕ್ರಿಕೆಟ್ ಕಡೆ ಗಮನ ಹರಿಸಿದ್ದಾರೆ.

ಇದನ್ನೂ ಓದಿ : ಸಂಕಷ್ಟ ಬಂದಾಗ ಸಚೇತ್… ಆನ್​ಲೈನ್ ಫ್ರಾಡ್, ಹೂಡಿಕೆ ವಂಚನೆಗೆ ಒಂದೇ ಪರಿಹಾರ! 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!