ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ತನ್ನ ವಾಗ್ದಾಳಿ ಮುಂದುವರಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿಯ ಡಿಗ್ರಿ ಸರ್ಟಿಫಿಕೆಟ್ ನಕಲಿಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯ ಡಿಗ್ರಿ ಸರ್ಟಿಫಿಕೆಟ್ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದ ಗುಜರಾತ್ ಹೈಕೋರ್ಟ್ ಕೇಜ್ರಿವಾಲ್ ಅವರಿಗೆ ದಂಡ ವಿಧಿಸಿದ ನಂತರ ಅವರ ಈ ಹೇಳಿಕೆ ಬಂದಿದೆ.
“ಒಬ್ಬ ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾಭ್ಯಾಸ ಇರುವ ಪ್ರಧಾನಿ ದೇಶಕ್ಕೆ ಅಪಾಯಕಾರಿ. ಪ್ರಧಾನಿ ಡಿಗ್ರಿ ಸರ್ಟಿಫಿಕೆಟ್ ತೋರಿಸದೆ ಇರಲು 2 ಕಾರಣಗಳಿವೆ. ಒಂದೋ ಅವರ ಈಗೋ ಸರ್ಟಿಫಿಕೆಟ್ ತೋರಿಸಲು ಬಿಡುತ್ತಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಇಂತಹ ವರ್ತನೆ ಒಪ್ಪುವಂತಹದ್ದಲ್ಲ. ಮತ್ತೊಂದು ಪ್ರಶ್ನೆ ಏನೆಂದರೆ ಅವರ ಸರ್ಟಿಫಿಕೆಟ್ ನಕಲಿ ಆಗಿರಬಹುದೇ?” ಎಂದು ಪ್ರಶ್ನಿಸಿದ್ದಾರೆ.