ಇರಾನ್: ಅಮೆರಿಕ ಹಾಗೂ ಇಸ್ರೇಲ್ ಇರಾನ್ ಮೇಲೆ (Iran Israel War) ದಾಳಿ ಪ್ರಾರಂಭಿಸಿದ ಮೊದಲ ದಿನವೇ ಅಲಿ ಖಮೇನಿಯನ್ನು (Ali Khamenei) ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಏಳು ವಾರಗಳೇ ಕಳೆದಿದ್ದರೂ ಇದುವರೆಗೂ ಖಮೇನಿ ಅಂತ್ಯಕ್ರಿಯೆ (Funeral) ನೆರವೇರಿಸಲಾಗಿಲ್ಲ ಎಂದು ಸೌದಿ ಅರೇಬಿಯಾ ಮೂಲದ ಮಾಧ್ಯಮವೊಂದು ವರದಿ ಮಾಡಿದೆ. ಇರಾನ್ ಸರ್ಕಾರ ಇದುವರೆಗೂ ಖಮೇನಿ ಹತ್ಯೆಯ ವಿಷಯವನ್ನು ಗೌಪ್ಯವಾಗಿಟ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಬಂದ್ ಆಗುತ್ತಾ ಬಾಬ್ ಅಲ್-ಮಂದೇಬ್ ಜಲಸಂಧಿ..? – ಅಮೆರಿಕಾಗೆ ಹೌತಿ ಬಂಡುಕೋರ ವಾರ್ನಿಂಗ್
ಈ ಕಾರಣಕ್ಕೆ ಇರಾನ್‌ನ ಒಳಾಡಳಿತದಲ್ಲಿ ತೀವ್ರ ಗೊಂದಲ ನಿರ್ಮಾಣವಾಗಿದ್ದು, ಅಧಿಕಾರ ಹಸ್ತಾಂತರದ ಪ್ರಕ್ರಿಯೆಯ ಕುರಿತು ಅನಿಶ್ಚಿತತೆ ಮೂಡಿದೆ. ಈ ಹಂತದಲ್ಲಿ ಯಾವುದೇ ಅಧಿಕೃತ ಹೇಳಿಕೆ ನೀಡಲು ಇರಾನ್ ನ ಆಡಳಿತ ಹಿಂಜರಿಯುತ್ತಿದೆ.
ಇರಾನ್ ಮಾಧ್ಯಮಗಳ ವರದಿಯ ಪ್ರಕಾರ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಇರಾನ್‌ನ ಉನ್ನತ ಅಧಿಕಾರಿಗಳು ತೀವ್ರ ಭಯಭೀತರಾಗಿದ್ದಾರೆ. ಒಂದು ವೇಳೆ ಸಾರ್ವಜನಿಕವಾಗಿ ಅಂತ್ಯಸಂಸ್ಕಾರ ಮಾಡಿದರೆ, ವಿರೋಧಿ ಗುಂಪುಗಳು ಮತ್ತು ಪ್ರತಿಭಟನಾಕಾರರು ಶವಯಾತ್ರೆಯ ಮೇಲೆ ದಾಳಿ ಮಾಡಬಹುದು ಅಥವಾ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ನಾಂದಿಯಾಗಬಹುದು ಎಂಬ ಆತಂಕ ಕಾಡುತ್ತಿದೆ ಎನ್ನಲಾಗಿದೆ. ಈ ಕಾರಣದಿಂದಲೇ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲು ಮತ್ತು ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.