Thursday, April 16, 2026
Homeworld newsIRAN-ISRAEL: ಭಾರತ ರಾಜತಾಂತ್ರಿಕತೆಗೆ ಗೆಲುವು! ಸೌದಿಯಿಂದ ಮುಂಬೈಗೆ ಬಂತು 1.35 ಲಕ್ಷ ಮೆಟ್ರಿಕ್ ಟನ್​ ಪೆಟ್ರೋಲಿಯಂ-VIDEO

IRAN-ISRAEL: ಭಾರತ ರಾಜತಾಂತ್ರಿಕತೆಗೆ ಗೆಲುವು! ಸೌದಿಯಿಂದ ಮುಂಬೈಗೆ ಬಂತು 1.35 ಲಕ್ಷ ಮೆಟ್ರಿಕ್ ಟನ್​ ಪೆಟ್ರೋಲಿಯಂ-VIDEO

ಮುಂಬೈ : ಇರಾನ್​​-ಇಸ್ರೇಲ್ (Iran-Israel)​ ಯುದ್ಧ ಪರಿಣಾಮದಿಂದಾಗಿ ಸಿಲಿಂಡರ್​​ ಸಮಸ್ಯೆ (LPG Crisis) ಎದುರಿಸುತ್ತಿದ್ದ ಜನರಿಗೆ ಕೊನೆಗೂ ಕೇಂದ್ರ ಸರ್ಕಾರ ಒಂದು ಒಳ್ಳೆಯ ಸುದ್ದಿ ಕೊಟ್ಟಿದೆ. ಇದರಿಂದ ಗ್ಯಾಸ್​​ ಸಿಲಿಂಡರ್​​ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಹಾರ್ಮುಜ್ ಜಲಸಂಧಿಯಿಂದ್ಲೇ (Strait of Hormuz) ಭಾರತಕ್ಕೆ ತೈಲ ಬರುತ್ತಿದೆ. ಅದಕ್ಕೆ ಕಾರಣ ಎಸ್.ಜೈಶಂಕರ್.

ಸುಮಾರು 6 ದಿನಗಳಿಂದ ಗ್ಯಾಸ್​ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಒಂದು ಒಳ್ಳೆಯ ಸುದ್ದಿ ನೀಡಿದೆ. ಅದೆಷ್ಟೋ ಹೋಟೆಲ್​ ಮಾಲೀಕರು, ರೆಸ್ಟೋರೆಂಟ್​ ಮಾಲೀಕರು, ಅಡುಗೆ ತಯಾರಕರು ಗ್ಯಾಸ್​ ಇಲ್ಲದೇ ಪರದಾಡುತ್ತಿದ್ದರು, ಇತ್ತ ಆಟೋ ಚಾಲಕರು ಕೂಡ ಆಟೋಗೆ ಗ್ಯಾಸ್​ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಾಸ್ಟರ್​ ಪ್ಲಾನ್​ ಮಾಡಿದೆ.

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಈ ಚರ್ಚೆ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ತೈಲ ಟ್ಯಾಂಕರ್‌ಗಳು ಹಾದುಹೋಗಲು ಇರಾನ್ ಅನುಮತಿ ನೀಡಿದ್ದು, ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಜಯವಾಗಿದೆ.

ಸೌದಿ ಅರೇಬಿಯಾದಿಂದ ಬಂತು ತೈಲ ಟ್ಯಾಂಕರ್..!
​ಹರ್ಮೋಜ್​ ಜಲಸಂಧಿ ದಾಟಿ ಸೌದಿ ಅರೇಬಿಯಾದ ತೈಲ ಟ್ಯಾಂಕರ್​ ಮುಂಬೈಗೆ ಬಂದಿದೆ. 1 ಲಕ್ಷದ 35 ಸಾವಿರ ಮೆಟ್ರಿಕ್ ಟನ್​ ಕಚ್ಚಾ ತೈಲ ಹೊತ್ತ ತೈಲ ಬಂದಿದ್ದು, ಅದು ಗ್ರಾಹಕರ ಕೈಸೇರಲು 40 ದಿನಗಳು ಬೇಕು.


ಭಾರತಕ್ಕೆ ‘ಜೈ’ಎಂದ ಇರಾನ್!
ಶೇಕಡಾ 60ರಷ್ಟು ಗ್ಯಾಸ್ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಬೇಕು. ಗ್ಯಾಸ್​ ಟ್ಯಾಂಕರ್ಸ್ ಹರ್ಮೋಜ್​ ಜಲಸಂಧಿ ದಾಟಿಯೇ ಬರಬೇಕು. ಇಷ್ಟು ದಿನ LPG ಟ್ಯಾಂಕರ್ಸ್​ ಜಲಸಂಧಿ ದಾಟುತ್ತಿರಲಿಲ್ಲ. ಇದರಿಂದ ವಿಶೇಷವಾಗಿ ಕರ್ನಾಟಕ, ತಮಿಳುನಾಡಲ್ಲಿ ಸಮಸ್ಯೆ ಆಗ್ತಿತ್ತು. ಇದಿಗ ಮೋದಿ ರಾಜತಾಂತ್ರಿಕತೆ ಗೆದ್ದಿದೆ. ಭಾರತಕ್ಕೆ ಅತಿದೊಡ್ಡ ರಿಲೀಫ್​ ಸಿಕ್ಕಿದೆ. ಭಾರತದ ಹಡಗುಗಳಿಗೆ ಇರಾನ್ ಯಾವುದೇ ಅಡ್ಡಿ ಮಾಡೋದಿಲ್ಲ. ಸದ್ಯ ಸೌದಿಯಿಂದ 1.35 ಲಕ್ಷ ಮೆಟ್ರಿಕ್ ಟನ್​ ಪೆಟ್ರೋಲಿಯಂ ಬಂದಿದೆ. ಹರ್ಮೋಜ್ ದಾಟಲು ಭಾರತದ ನೌಕೆಗಳಿಗೆ ಇರಾನ್ ಅನುಮತಿ ನೀಡಿದೆ. ಜೈಶಂಕರ್​ ಮಾತುಕತೆ ಬೆನ್ನಲ್ಲೇ ಭಾರತಕ್ಕೆ ವಿನಾಯಿತಿ ಸಿಕ್ಕಿದ್ದು, ಶೀಘ್ರವೇ ಭಾರತಕ್ಕೆ ಇನ್ನೊಂದು ತೈಲ ಹಡಗು ಬರಲಿದೆ.

ಇರಾನ್ ಚೀನಾದ ಹಡಗುಗಳಿಗೂ ವಿನಾಯಿತಿ
ಹಾರ್ಮುಜ್ ಜಲಸಂಧಿಯು ಪ್ರತಿದಿನ 20 ಮಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲ ಮತ್ತು ಜಾಗತಿಕ ಎಲ್‌ಎನ್‌ಜಿಯ ಗಮನಾರ್ಹ ಭಾಗವನ್ನು ಸಾಗಿಸುತ್ತದೆ. ಚೀನಾ ಮತ್ತು ರಷ್ಯಾ ಒಡೆತನದ ಹಡಗುಗಳಿಗೆ ಮಾತ್ರ ಹಾದುಹೋಗಲು ಅನುಮತಿ ಇದೆ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ.

ಸಿಲಿಕಾನ್ ಸಿಟಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ..!
ದಿನೇ ದಿನೆ ಗ್ಯಾಸ್​ಗೆ ಹಾಹಾಕಾರ ಜೋರಾಗ್ತಿದೆ. ಆದ್ದರಿಂದ ಕೇಂದ್ರ ಸರ್ಕಾರದ ವಿರುದ್ಧ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಿರ್ಮಲಾ ಸೀತಾರಾಮನ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ್ರು.

ಹೆಚ್ಚಿನ ಸುದ್ದಿ

Change Language »
error: Content is protected !!