Saturday, May 16, 2026
Homeಟಾಪ್ ನ್ಯೂಸ್IRAN: ನಮ್ಮ ಹತ್ರ ಇರುವ ತೈಲವನ್ನ ಯಾವುದೇ ದೇಶಕ್ಕೂ ಮಾರಾಟ ಮಾಡಲು ಸಿದ್ದ ಎಂದ ಇರಾನ್

IRAN: ನಮ್ಮ ಹತ್ರ ಇರುವ ತೈಲವನ್ನ ಯಾವುದೇ ದೇಶಕ್ಕೂ ಮಾರಾಟ ಮಾಡಲು ಸಿದ್ದ ಎಂದ ಇರಾನ್

ಇರಾನ್‌: ತನ್ನ ಬಳಿ ಇರುವ ತೈಲವನ್ನ (Crude Oil) ಯಾವುದೇ ದೇಶಕ್ಕಾದರೂ ಮಾರಾಟ ಮಾಡಲು ಸಿದ್ದವಿರುವುದಾಗಿ ಭಾರತಕ್ಕೆ ಇರಾನ್‌ (Iran) ತಿಳಿಸಿದೆ. ಈ ವಿಚಾರವನ್ನ ಭಾರತಕ್ಕೆ ಇರಾನ್‌ ರಾಯಭಾರಿ ಆಗಿರುವ ಡಾ. ಮೊಹಮದ್‌ ಫತಾಲಿ ಹೇಳಿದ್ದಾರೆ.

ಇರಾನ್ , ಯುಎಸ್ ಸಂಧಾನ ವೈಫಲ್ಯದ ಎಫೆಕ್ಟ್ – ಕಚ್ಚಾತೈಲದ ಬೆಲೆ ಧಿಡೀರ್ ಏರಿಕೆ!

ಪಾಕಿಸ್ತಾನದಲ್ಲಿ(Pakistan) ಇರಾನ್‌ (iran)ಅಮೆರಿಕ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ. ಈ ಬೆನ್ನಲ್ಲೇ ಕಚ್ಚಾ ತೈಲ ಬೆಲೆಗಳು (Crude Oil Price) ಸುಮಾರು ಶೇ. 11 ರಷ್ಟು ತೀವ್ರವಾಗಿ ಜಿಗಿದಿದೆ. ಹಾರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿಗ್ಭಂಧನ ಘೋಷಿಸಿದ್ದಾರೆ. ಇದರಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.

ದಿಢೀರ್​​ ಸೋಮವಾರ ಬೆಳಗ್ಗೆ WTI ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $104.25 ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಕೂಡ $101 ಹತ್ತಿರ ವಹಿವಾಟು ಮಾಡುತ್ತಿದೆ. ಒಂದು ದಿನದಲ್ಲೇ ಸುಮಾರು ಶೇ. 11 ರಷ್ಟು ಬೆಲೆ ಜಿಗಿತ ಕಂಡಿದೆ. ಇಷ್ಟು ತೀವ್ರ ಏರಿಕೆ ಅಂದರೆ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಬಗ್ಗೆ ಭಾರಿ ಅನಿಶ್ಚಿತತೆ ಇದೆ ಎಂದು ಅರ್ಥ.

ಕಚ್ಚಾ ತೈಲ ಬೆಲೆ ಶೇ.11 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ 105 ಡಾಲರ್‌ (9,774 ರೂ.) ತಲುಪಿದೆ. WTI ಕಚ್ಚಾ ತೈಲವು ಪ್ರತಿ ಬ್ಯಾರಲ್‌ಗೆ 104.25 ಡಾಲರ್‌ (9,704 ರೂ.) ನಷ್ಟಿದ್ದರೆ, ಬ್ರೆಂಚ್‌ ಕಚ್ಚಾತೈಲ ಬ್ಯಾರಲ್‌ಗೆ 101 ಡಾಲರ್‌ ಸಮೀಪದಲ್ಲಿ ಸೋಮವಾರ ವಹಿವಾಟು ನಡೆಸುತ್ತಿದೆ.

ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಟ್ರಂಪ್‌ ಹಾರ್ಮುಜ್‌ ಜಲಸಂಧಿ ಮೇಲೆ ನಿರ್ಬಂಧ ಹೇರಿದ್ದಾರೆ. ಪರಮಾಣು ಒಪ್ಪಂದಕ್ಕೆ (Nuclear deal) ಇರಾನ್‌ ಒಪ್ಪದ ನಿಲುವನ್ನು ಉಲ್ಲೇಖಿಸಿ, ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ 426 ತೈಲ ಹಡಗುಗಳು ಲಾಕ್

ಶಿಪ್ಪಿಂಗ್ ಇಂಟೆಲಿಜೆನ್ಸ್ ಸಂಸ್ಥೆಯಾದ ‘ಕೆಪ್ಲರ್’ ನೀಡಿದ ಮಾಹಿತಿಯ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಏರ್ಪಟ್ಟ ನಂತರ ಈವರೆಗೆ ಒಂದೇ ಒಂದು ತೈಲ ಟ್ಯಾಂಕರ್ ಕೂಡ ಹಾರ್ಮುಜ್ ಜಲಸಂಧಿಯನ್ನು ದಾಟಿಲ್ಲ. ಪ್ರಸ್ತುತ ಸುಮಾರು 426 ತೈಲ ಟ್ಯಾಂಕರ್‌ಗಳು ಮತ್ತು 53 ಅನಿಲ ಟ್ಯಾಂಕರ್‌ಗಳು ಕೊಲ್ಲಿ ಪ್ರದೇಶದಲ್ಲಿ ಸಿಲುಕಿಕೊಂಡಿವೆ ಎಂದು ಸಿಎನ್ಎನ್ ವರದಿ ಮಾಡಿದೆ. ಈ ಬೆಳವಣಿಗೆಯು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಧ್ಯಸ್ಥಿಕೆ ಮಾಡಲು ಹೋದ ಪಾಕ್‌ಗೆ ಮುಖಭಂಗ, ಪಾಕಿಸ್ತಾನದ ಮುಂದಿನ ಹಾದಿ ಕಠಿಣ

ಹೆಚ್ಚಿನ ಸುದ್ದಿ

Change Language »
error: Content is protected !!