ಬೆಂಗಳೂರು : ಇಂದು (ಏ.14) ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 146 ರನ್ ಗಳಿಗೆ ಆಲ್ ಔಟ್ ಆಗಿದ್ದು, ಆರ್.ಸಿ.ಬಿ ತಂಡಕ್ಕೆ 147 ರನ್ ಗಳ ಗುರಿ ನೀಡಿದೆ.
ಇದನ್ನೂ ಓದಿ : ಆರ್.ಸಿ.ಬಿ vs ಎಲ್.ಎಸ್.ಜಿ ಹಣಾಹಣಿ – ಟಾಸ್ ಗೆದ್ದ ಆರ್.ಸಿ.ಬಿ ಬೌಲಿಂಗ್ ಆಯ್ಕೆ
ಇನ್ನು ಪಂದ್ಯದ ಆರಂಭದಿಂದಲೇ ಆರ್.ಸಿ.ಬಿ ಬೌಲರ್ ಗಳು ಲಕ್ನೋ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಎಲ್.ಎಸ್.ಜಿ ತಂಡದ ಆರಂಭಿಕರಾದ ಮಿಚೆಲ್ ಮಾರ್ಷ್ 40 ರನ್, ಮಾರ್ಕ್ರಮ್ 12, ನಾಯಕ ಪಂತ್ 1, ಪೂರನ್ 1 ರನ್, ಬದೋನಿ 38, ಅಬ್ದುಲ್ ಸಮದ್ 0, ಮುಕುಲ್ ಚೌದ್ರಿ 39 ರನ್ ಗಳಿಸಿದ್ರು. ಆರ್.ಸಿ.ಬಿ ಪರ ರಸಿಕ್ ದಾರ್ 4 ವಿಕೆಟ್, ಕೃನಾಲ್ ಪಾಂಡ್ಯ 2, ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದ್ರೆ, ಹೇಜಲ್ ವುಡ್ 1 ವಿಕೆಟ್ ಪಡೆದ್ರು.
ಇದುವರೆಗೂ ಬೆಂಗಳೂರು ಮೈದಾನದಲ್ಲಿ ಆಡಿರುವ ಎರಡೂ ಪಂದ್ಯಗಳನ್ನೂ ಲಕ್ನೋ ತಂಡ ಗೆದ್ದು ಅಜೇಯವಾಗಿ ಉಳಿದಿದೆ. ಆದ್ರೆ ಇಂದಿನ ಪಂದ್ಯದಲ್ಲಿ ಎಲ್.ಎಸ್.ಜಿ ಗೆ ಸೋಲಿನ ರುಚಿ ತೋರಿಸುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಗೆದ್ದಲ್ಲಿ 8 ಪಾಯಿಂಟ್ ಗಳ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಮತ್ತೊಂದು ಸ್ಥಾನ ಮೇಲಕ್ಕೇರಲಿದೆ.