Sunday, November 10, 2024
Homeಟಾಪ್ ನ್ಯೂಸ್ಶುರುವಾಯ್ತು ಬಿಜೆಪಿ ಕಚ್ಚಾಟ : ಇದು ಜಾರಕಿಹೊಳಿ ವರ್ಸಸ್ ಲಕ್ಷ್ಮಣ ಸವದಿ ಸ್ಟೋರಿ

ಶುರುವಾಯ್ತು ಬಿಜೆಪಿ ಕಚ್ಚಾಟ : ಇದು ಜಾರಕಿಹೊಳಿ ವರ್ಸಸ್ ಲಕ್ಷ್ಮಣ ಸವದಿ ಸ್ಟೋರಿ

ಚಿಕ್ಕೋಡಿ: ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿಗೆ ಬೆಂಬಲ ಸೂಚಿಸಿ ನಾವೇ ಸರ್ಕಾರ ಮಾಡಿದ್ದು ಎಂದು ಬೀಗುತ್ತಿದ್ದ ಬಾಂಬೆ ಬಾಯ್ಸ್ ಬಳಗದಲ್ಲಿದ್ದ ಮಹೇಶ್‌ ಕುಮಠಳ್ಳಿ ಸ್ಥಿತ ಅತಂತ್ರವಾಗುವಂತಿದೆ. ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಕೇಳ್ತಿರೋದು ಈಗ ವಲಸಿಗ ಮಹೇಶ್‌ ಕುಮಠಳ್ಳಿಗೆ ತಲೆಬಿಸಿಯಾಗಿದೆ.

ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ


ಮಹೇಶ್‌ ಕುಮಠಳ್ಳಿ ತಲೆಬಿಸಿ ಒಂದೆಡೆಯಾದ್ರೆ ವಲಸಿಗರ ಗ್ಯಾಂಗ್‌ನ ಮುಂದಾಳತ್ವ ವಹಿಸಿದ್ದ ರಮೇಶ್‌ ಜಾರಕಿಹೊಳಿಗೆ ಇದು ಮರ್ಯಾದೆ ಪ್ರಶ್ನೆಯಾಗಿದೆ. ಒಂದು ವೇಳೆ ಲಕ್ಷ್ಮಣ ಸವದಿಗೆ ಅವಕಾಶ ಕೊಟ್ರೆ ಮಹೇಶ್‌ ಕುಮಠಳ್ಳಿ ನೆಲೆ ಕಳೆದುಕೊಳ್ಳೂತ್ತಾರೆ. ತಮ್ಮ ರಾಜಕೀಯ ಭವಿಷ್ಯವೇ ಅತಂತ್ರವಾದರೆ ರಮೇಶ್‌ ಜಾರಕಿಹೊಳಿಯವರನ್ನು ಕುಮಠಳ್ಳಿ ದೂಷಿಸದೇ ಬಿಡೋದಿಲ್ಲ.. ಹೀಗಾಗಿ ಈಗ ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ ಕಾರುತ್ತಿದ್ದಾರೆ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.


ಲಕ್ಷ್ಮಣ ಸವದಿಗೆ ಕನಿಷ್ಠ ಜ್ಞಾನವಿರಬೇಕು : ರಮೇಶ್‌ ಜಾರಕಿಹೊಳಿ

ಅಥಣಿ ಪಟ್ಟಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ರಮೇಶ್, ಲಕ್ಷ್ಮಣ ಸವದಿ ಬುದ್ಧಿವಂತ ರಾಜಕಾರಣಿ, ಅವರು ಹಿಂಗ್ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಎಂಎಲ್‌ಸಿ ಆಗಿದ್ದರೂ, ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ ಎಂದು ಹೇಳಿಕೆ ನೀಡಿರುವುದು ನನಗೆ ಅಚ್ಚರಿಯಾಗಿದೆ. ಮಹೇಶ್ ಕುಮಠಳ್ಳಿ ಕಾಂಗ್ರೆಸ್ ಪಕ್ಷ ಬಿಟ್ಟು ಬಂದ್ದರಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ ಮುಂದಿನ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ. ಒಂದು ವೇಳೆ ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಸುದ್ದಿ

error: Content is protected !!