Thursday, July 16, 2026
Homeಟಾಪ್ ನ್ಯೂಸ್INTERESTING FACTS : ಇದು ರಂಧ್ರದ ರಹಸ್ಯ..! ಜೀನ್ಸ್ ಪ್ಯಾಂಟ್​​​​​​ನ ಜಿಪ್​​​​​ನಲ್ಲಿ ಸಣ್ಣ ಹೋಲ್ ಯಾಕಿರುತ್ತೆ...

INTERESTING FACTS : ಇದು ರಂಧ್ರದ ರಹಸ್ಯ..! ಜೀನ್ಸ್ ಪ್ಯಾಂಟ್​​​​​​ನ ಜಿಪ್​​​​​ನಲ್ಲಿ ಸಣ್ಣ ಹೋಲ್ ಯಾಕಿರುತ್ತೆ ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ ಆಫೀಸಿಗೋ, ಕಾಲೇಜಿಗೋ (College) ಹೊರಡುವ ಅವಸರದಲ್ಲಿ ನಾವೆಲ್ಲರೂ ಜೀನ್ಸ್ ಪ್ಯಾಂಟ್ (Jeans Pant) ಧರಿಸುತ್ತೇವೆ. ಆದರೆ, ಜೀನ್ಸ್ ಜಿಪ್ ಎಳೆಯುವಾಗ ಅಲ್ಲಿರೋ (Interesting Facts) ಆ ಪುಟ್ಟ ರಂಧ್ರವನ್ನು (Hole) ನೋಡಿ, “ಇದೇನೋ ಸುಮ್ಮನೆ ಫ್ಯಾಷನ್‌ಗೆ ಮಾಡಿರೋ ಡಿಸೈನ್ ಇರಬೇಕು” ಎಂದು ಉಡಾಫೆಯಿಂದ ಬಿಟ್ಟುಬಿಟ್ಟಿರುತ್ತೇವೆ.

ಆದರೆ ಜಾಗ್ರತೆ ಇಡೀ ಜಗತ್ತೇ ಗುಟ್ಟಾಗಿಟ್ಟಿರುವ, ಯಾರಿಗೂ ತಿಳಿಯದ ಮಹಾ ರಹಸ್ಯವೊಂದು ಆ ಪುಟ್ಟ ರಂಧ್ರದ ಹಿಂದೆ ಅಡಗಿದೆ. ಈ ಅಚ್ಚರಿಯ ಇಂಜಿನಿಯರಿಂಗ್ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟರೆ ನೀವು ಖಂಡಿತಾ ತಲೆ ಸುತ್ತಿ ಬೀಳುತ್ತೀರಾ..

interesting-facts-why-there-is-a-small-hole-in-jeans-zipper-puller

ಅಷ್ಟಕ್ಕೂ ಜೀನ್ಸ್ ಪ್ಯಾಂಟ್‌ಗಳಲ್ಲಿ ಆ ರಂಧ್ರ ಯಾಕಿದೆ ಗೊತ್ತಾ? ಇಲ್ಲಿದೆ ನೋಡಿ ಆ ರೋಚಕ ಸಂಗತಿಗಳು:

ಬೆರಳುಗಳಿಗೆ ಸಿಗುತ್ತೆ ಸೂಪರ್ ಗ್ರಿಪ್

ತುರ್ತು ಸಂದರ್ಭದಲ್ಲಿ ಅಥವಾ ಅವಸರದಲ್ಲಿ ಜಿಪ್ ಹಾಕಿಕೊಳ್ಳುವಾಗ ಬೆರಳು ಜಾರಿ ಎಷ್ಟೋ ಜನ ಮುಜುಗರಕ್ಕೆ ಈಡಾಗಿದ್ದೂ ಉಂಟು. ಜಿಪ್‌ನ ಲೋಹದ ಪಟ್ಟಿ ಪ್ಲೇನ್ ಆಗಿದ್ದರೆ ಕೈ ಬೆರಳುಗಳಿಗೆ ಗ್ರಿಪ್ ಸಿಗುವುದಿಲ್ಲ. ಇದೇ ಕಾರಣಕ್ಕೆ ಆ ರಂಧ್ರವನ್ನು ನೀಡಲಾಗಿದೆ. ನೀವು ಜಿಪ್ ಹಿಡಿದ ತಕ್ಷಣ ನಿಮ್ಮ ಬೆರಳಿನ ಚರ್ಮ ಆ ರಂಧ್ರದೊಳಗೆ ಸರಿಯಾಗಿ ಕುಳಿತುಕೊಂಡು, ಜಿಪ್ ಅತಿ ಸುಲಭವಾಗಿ ಮೇಲಕ್ಕೆ-ಕೆಳಕ್ಕೆ ಮೂವ್ ಆಗಲು ಸಹಾಯ ಮಾಡುತ್ತದೆ.

ಜಿಪ್ ಲಾಕ್ ಆಯ್ತಾ? ಟೆನ್ಷನ್ ಬೇಡ, ಕೀ ಚೈನ್ ಹಾಕಿ ಎಳೆಯಿರಿ

interesting-facts-why-there-is-a-small-hole-in-jeans-zipper-puller

ಕೆಲವೊಮ್ಮೆ ಜೀನ್ಸ್ ಹಳೆಯದಾದಾಗ ಜಿಪ್ ಅರ್ಧದಲ್ಲೇ ಸಿಕ್ಕಿಹಾಕಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಇಡೀ ಜೀನ್ಸ್ ಪ್ಯಾಂಟ್ ಅನ್ನೇ ಬಿಸಾಡಬೇಕಾಗಿಲ್ಲ. ಆ ಪುಟ್ಟ ರಂಧ್ರಕ್ಕೆ ಒಂದು ಸಣ್ಣ ದಾರ ಅಥವಾ ಕೀ ಚೈನ್‌ನ ಲೋಹದ ರಿಂಗ್ ಸಿಕ್ಕಿಸಿ ಜಗ್ಗಿದರೆ ಸಾಕು, ಎಂತದೇ ಜಿಪ್ ಆದ್ರೂ ಜುರ್ರ್ ಅಂತ ಕೆಳಗೆ ಇಳಿಯಲೇಬೇಕು. ಇದು ಕಷ್ಟದ ಕಾಲಕ್ಕೆ ನೆರವಾಗುವ ಕಳ್ಳದಾರಿ.

ರೋಬೋಟ್‌ಗಳಿಗೂ ಬೇಕು ಈ ರಂಧ್ರದ ಸಪೋರ್ಟ್

interesting-facts-why-there-is-a-small-hole-in-jeans-zipper-puller

ನಿಮಗೆ ಗೊತ್ತಿರಲಿ, ಈ ಜಿಪ್‌ಗಳನ್ನು ಮನುಷ್ಯರು ಕೈಯಿಂದ ಮಾಡುವುದಿಲ್ಲ. ಬೃಹತ್ ಕಾರ್ಖಾನೆಗಳಲ್ಲಿ ಸ್ವಯಂಚಾಲಿತ ರೋಬೋಟಿಕ್ ಯಂತ್ರಗಳು ಕೋಟ್ಯಂತರ ಜಿಪ್‌ಗಳನ್ನು ಸಿದ್ಧಪಡಿಸುತ್ತವೆ. ಆ ಯಂತ್ರಗಳು ಜಿಪ್ ಪುಲ್ಲರ್ ಅನ್ನು ಗಟ್ಟಿಯಾಗಿ ಹಿಡಿದು ಪ್ಯಾಂಟ್‌ಗೆ ಫಿಕ್ಸ್ ಮಾಡಲು ಈ ರಂಧ್ರವನ್ನೇ ಹ್ಯಾಂಡಲ್ ಅಥವಾ ‘ಹುಕ್’ ತರಹ ಬಳಸಿಕೊಳ್ಳುತ್ತವೆ. 

ಒಂದು ವೇಳೆ ಆ ರಂಧ್ರವೇ ಇಲ್ಲದಿದ್ದರೆ, ಕಾರ್ಖಾನೆಯ ಯಂತ್ರಗಳಿಗೆ ಜಿಪ್ ಹಿಡಿಯಲು ಸಾಧ್ಯವಾಗದೆ ಇಡೀ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆಯೇ ಕುಸಿದುಬೀಳುತ್ತಿತ್ತು.

ಬೇಗ ಮುರಿದು ಬೀಳದಂತೆ ತಡೆಯುತ್ತೆ ಈ ಫಾರ್ಮುಲಾ.

interesting-facts-why-there-is-a-small-hole-in-jeans-zipper-puller

ಲೋಹದ ಪಟ್ಟಿಯ ಮಧ್ಯೆ ರಂಧ್ರ ಮಾಡುವುದರಿಂದ ಅದರ ತೂಕ ಮತ್ತು ಸಮತೋಲನ ಪರ್ಫೆಕ್ಟ್ ಆಗಿ ಇರುತ್ತದೆ. ಇದರಿಂದ ನೀವು ಎಷ್ಟು ಜೋರಾಗಿ ಜಿಪ್ ಜಗ್ಗಿದರೂ ಅದು ಅಷ್ಟು ಬೇಗ ಮುರಿದು ಹೋಗುವುದಿಲ್ಲ. ಅಂದಹಾಗೆ, ಈ ರಹಸ್ಯ ಕೇವಲ ಜೀನ್ಸ್ ಪ್ಯಾಂಟ್‌ಗೆ ಮಾತ್ರ ಸೀಮಿತವಾಗಿಲ್ಲ. ನಿಮ್ಮ ಬೆನ್ನ ಮೇಲಿರೋ ಕಾಲೇಜು ಬ್ಯಾಗ್, ಆಫೀಸ್ ಬ್ಯಾಗ್, ಚಳಿಗಾಲದ ಜಾಕೆಟ್ ಹಾಗೂ ಪ್ರವಾಸಕ್ಕೆ ಬಳಸುವ ಸೂಟ್‌ಕೇಸ್‌ಗಳ ಜಿಪ್‌ನಲ್ಲೂ ಈ ರೀತಿಯ ರಂಧ್ರಗಳು ಇರುತ್ತದೆ.

ಒಟ್ಟಿನಲ್ಲಿ, ಕೇವಲ ಸ್ಟೈಲ್ ಅಂದುಕೊಂಡಿದ್ದ ಆ ಸಣ್ಣ ರಂಧ್ರದ ಹಿಂದೆ ಇಷ್ಟೆಲ್ಲಾ ಹೈಟೆಕ್ ತಂತ್ರಜ್ಞಾನ ಮತ್ತು ಸೀಕ್ರೆಟ್ ಅಡಗಿದೆ ಎನ್ನುವುದು ನಿಜಕ್ಕೂ ಪ್ರತಿಯೊಬ್ಬ ಜೀನ್ಸ್ ಪ್ರೇಮಿಯೂ ತಿಳಿಯಬೇಕಾದ ವಿಚಾರ.

ಹೆಚ್ಚಿನ ಸುದ್ದಿ

Change Language »
error: Content is protected !!