Wednesday, February 19, 2025
Homeಕ್ರೈಂCRIME : ರೀಲ್ಸ್ ತಂದ ಆಪತ್ತು!? : ವಿಡಿಯೋ ಹಂಚಿದ್ದಕ್ಕೆ ಸಿನಿಮೀಯ ರೀತಿಯಲ್ಲಿ ಸ್ಕೆಚ್ ಹಾಕಿ...

CRIME : ರೀಲ್ಸ್ ತಂದ ಆಪತ್ತು!? : ವಿಡಿಯೋ ಹಂಚಿದ್ದಕ್ಕೆ ಸಿನಿಮೀಯ ರೀತಿಯಲ್ಲಿ ಸ್ಕೆಚ್ ಹಾಕಿ ಕುಸ್ತಿ ಪೈಲ್ವಾನ್ ಕೊಲೆ!

ಬೆಳಗಾವಿ: ಕುಸ್ತಿ ಪೈಲ್ವಾನ್​ ಒಬ್ಬರನ್ನು ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ಜ.15ರಂದು ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ನಿವಾಸಿ ಪ್ರಕಾಶ್ ಇರಟ್ಟಿ (26) ಕೊಲೆಯಾದ ಯುವಕ.

ಪ್ರಕಾಶ್ ಚಲನವಲನ ಬಗ್ಗೆ ಮಾಹಿತಿ ನೀಡಲು ಆರೋಪಿಗಳು ಅಪ್ರಾಪ್ತರನ್ನು ಇನ್ಫಾರ್ಮರ್ ಆಗಿ ಬಳಸಿಕೊಂಡು ಕೊಲೆಗೆ ಸ್ಕೆಚ್‌ ಹಾಕಿದ್ದರು. ಅದರಂತೆ ಪ್ಲ್ಯಾನ್‌ ಜಾರಿ ಮಾಡಿದ ಆರೋಪಿಗಳು ಪ್ರಕಾಶ್‌ನನ್ನು ಕೊಚ್ಚಿ ಕೊಂದಿದ್ದಾರೆ

ರವಿಚಂದ್ರ ಪಾತ್ರೋಟ್, ಉಮೇಶ್ ಕಂಬಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಿಕ್ ಸೇರಿ ಇಬ್ಬರು ಬಾಲಾಪರಾಧಿಗಳು ಬಂಧಿತರು.

ಪ್ರಕಾಶ್ ಇರಟ್ಟಿ ಮತ್ತು ರವಿಚಂದ್ರ ಪಾತ್ರೋಟ್ ನಡುವೆ ಕೊಳವಿ ಜಾತ್ರೆಯಲ್ಲಿ ಗಲಾಟೆಯಾಗಿತ್ತು. ಗಲಾಟೆಯ ಬೆನ್ನಲ್ಲೇ, ಎರಡು ರೀಲ್ ವೀಡಿಯೋ‌ಗಳನ್ನು ಹಾಕಿದ್ದ ರವಿಚಂದ್ರನನ್ನು ಪ್ರಕಾಶ್ ಕೆಣಕಿದ್ದಾನೆ.​ ಇದಾದ ನಂತರ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ ಪ್ರಕಾಶ್ ಹೋದಾಗ ಆತನ ಬರುವಿಕೆಯನ್ನೇ ಕಾಯುತ್ತಿದ್ದ ಆರೋಪಿಗಳು ಪ್ರಕಾಶ್ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪ್ರಕರಣ ಕುರಿತಾಗಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್​ ಪ್ರತಿಕ್ರಿಯಿಸಿದ್ದು, ಜ.14‌ರಂದು ಗೋಕಾಕ್ ತಾಲೂಕಿನ ಕೊಳವಿ ಹುಲಿಕಟ್ಟಿ ಗ್ರಾಮದಲ್ಲಿ ಕೊಲೆಯಾದ್ದು, ಕೊಳವಿ ಗ್ರಾಮದ ಪ್ರಕಾಶ್ ಇರಟ್ಟಿ ಎಂಬು ಖಾತ್ರಿಯಾಗಿದೆ. ಹುಲಿಕಟ್ಟಿ ಜಾತ್ರೆ ಮುಗಿಸಿ ವಾಪಾಸ್ ಮನೆಗೆ ಹೋಗುವಾಗ
ಆತನನ್ನು ಆರೋಪಿಗಳು ಅಡ್ಡಗಟ್ಟಿ ಹತ್ಯೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ರು

ಹೆಚ್ಚಿನ ಸುದ್ದಿ

error: Content is protected !!