ನವದೆಹಲಿ : ಭಾರತದ ಧೀಮಂತ ರಾಜಕಾರಣಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಮ್ಮನಗಲಿ 40 ವರ್ಷ ಕಳೆದಿವೆ. ಇವತ್ತು ದೇಶಾದ್ಯಂತ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ ಮಾಡಲಾಗ್ತಿದೆ.
#WATCH | Delhi: Lok Sabha LoP and Congress MP Rahul Gandhi pays tribute to former Prime Minister Indira Gandhi at Shakti Sthal on her death anniversary. pic.twitter.com/kX9TNTKe73
— ANI (@ANI) October 31, 2024
ನವದೆಹಲಿಯ ಶಕ್ತಿಸ್ಥಳಕ್ಕೆ ಗುರುವಾರ ಬೆಳಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ , ಅಜ್ಜಿಯ ಪುಣ್ಯತಿಥಿ ಅಂಗವಾಗಿ ಭೇಟಿ ನೀಡಿ ವಿಶೇಷ ನಮನ ಸಲ್ಲಿಸಿದರು. ಪ್ರೀತಿಯ ಅಜ್ಜಿಯ ಸಮಾಧಿ ಮುಂದೆ ಕೆಲಕಾಲ ನಿಂತು ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ , ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ವಂದಿಸಿದರು.
ಗುರುವಾರ ಶಕ್ತಿಸ್ಥಳದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಇಂದಿರಾಗಾಂಧಿ ಸಮಾಧಿಗೆ ಪೂಜೆ ಸಲ್ಲಿಸಿ ವಿಶೇಷ ಜೈಕಾರ ಕೂಗಿದರು. ಇಷ್ಟೇ ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಪ್ರಿಯಾಂಕಾ ವಾದ್ರಾ ಸೇರಿದಂತೆ ಅಗ್ರಗಣ್ಯ ನಾಯಕರು ಇವತ್ತು ಭೇಟಿ ನೀಡಲಿದ್ದಾರೆ.