Wednesday, December 4, 2024
Homeಟಾಪ್ ನ್ಯೂಸ್GDP : ಶೇ 5.4ಕ್ಕೆ ಇಳಿಕೆ ಕಂಡ ದೇಶದ ಜಿಡಿಪಿ ಬೆಳವಣಿಗೆ ದರ- 2ನೇ ತ್ರೈಮಾಸಿಕ...

GDP : ಶೇ 5.4ಕ್ಕೆ ಇಳಿಕೆ ಕಂಡ ದೇಶದ ಜಿಡಿಪಿ ಬೆಳವಣಿಗೆ ದರ- 2ನೇ ತ್ರೈಮಾಸಿಕ ವರದಿ

ನವದೆಹಲಿ : ಜುಲೈನಿಂದ ಸೆಪ್ಟೆಂಬರ್​​​​ ವರೆಗಿನ 2ನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟಾರೆ ಜಿಡಿಪಿಯು ಶೇ.5.4ಕ್ಕೆ ಕುಸಿತ ಕಂಡಿದ್ದು, ಇದು 2 ವರ್ಷಗಳಲ್ಲಿ ಅತ್ಯಂತ ಕಡಿಮೆಯ ದಾಖಲೆ ಪ್ರಮಾಣದಲ್ಲಿ ಜಿಡಿಪಿ ದರ ಕುಸಿತವಾಗಿದೆ ಎಂದು ವರದಿ ಹೇಳಿದೆ.

ಉತ್ಪಾದನೆ ಮತ್ತು ಗಣಿಗಾರಿಕೆ ವಲಯಗಳ ಕಳಪೆ ಕಾರ್ಯಕ್ಷಮತೆಯಿಂದಾಗಿ ಈ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು 2 ವರ್ಷಗಳ ಕನಿಷ್ಠ ಶೇ 5.4ಕ್ಕೆ ಕುಸಿದಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇನ್ನು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ GDP ಯು ಶೆ 7.2ರಷ್ಟು ಪ್ರಗತಿ ಕಾಣಲಿದೆ ಎಂದು RBI ಅಂದಾಜು ಮಾಡಿತ್ತು. ಆದ್ರೆ ಆ ಮಟ್ಟದ ಪ್ರಮಾಣ ದಾಖಲಾಗಿಲ್ಲ. 2023 ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.1ರಷ್ಟು ಇತ್ತು.

2024-25ನೇ ಆರ್ಥಿಕ ವರ್ಷದ ಜಿಡಿಪಿ ಶೇ. 7ರಷ್ಟು ಪ್ರಗತಿ ಹೊಂದಲಿದ್ದು, ಪ್ರಸಕ್ತ ಸಾಲಿನ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢವಾಗಲಿವೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಅಭಿಪ್ರಾಯಪಟ್ಟಿತು.  ಭಾರೀ ಮಳೆ ಹಾಗೂ ಕಾರ್ಪೋರೇಟ್ ವಲಯದಲ್ಲಿನ ಬೆಳವಣಿಗೆ ಕುಂಠಿತವಾಗಿರುವ ಕಾರಣಕ್ಕೆ ಜಿಡಿಪಿ ಕುಸಿತಕ್ಕೂ ಕಾರಣ ಎಂದು ಅಂದಾಜಿಸಲಾಗಿದೆ. 2ನೇ ತ್ರೈಮಾಸಿಕದ ಅಧಿಕೃತ ವರದಿಯನ್ನು ನಾಳೆ (ನ.30) ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಪ್ರಕಟಿಸಲಿದೆ.

ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳ ಜಿವಿಎ (Gross Value Added-ಕೃಷಿ ಕ್ಷೇತ್ರದ ಬೆಳವಣಿಗೆ) ವಿಸ್ತರಣೆಯು ಶೇಕಡಾ 6.7 ರಷ್ಟಿದ್ದು, ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಶೇಕಡಾ 6.2 ರಷ್ಟಿತ್ತು. ಅಂಕಿ-ಅಂಶಗಳ ಪ್ರಕಾರ, ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯಲ್ಲಿನ ಉತ್ಪಾದನೆಯು (ಜಿವಿಎ) 2ನೇ ತ್ರೈಮಾಸಿಕದಲ್ಲಿ ಶೇಕಡಾ 0.01 ಕ್ಕೆ ಸಂಕುಚಿತಗೊಂಡಿತು, ಇದು ವರ್ಷದ ಹಿಂದೆ ಶೇಕಡಾ 11.1 ರ ಬೆಳವಣಿಗೆಯಾಗಿದೆ. ಇದಲ್ಲದೇ ನಿರ್ಮಾಣ ವಲಯವು 2ನೇ ತ್ರೈಮಾಸಿಕದಲ್ಲಿ 7.7 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ವರ್ಷದಿಂದ ವರ್ಷಕ್ಕೆ 13.6 ಶೇಕಡಾದಿಂದ ಕಡಿಮೆಯಾಗಿದೆ.

ಹೆಚ್ಚಿನ ಸುದ್ದಿ

error: Content is protected !!