ಯುಕೆ: ಅಪ್ರಾಪ್ತ ವಯಸ್ಸಿನ ಹುಡುಗಿಯರ ಜೊತೆ ಆನ್‌ಲೈನ್‌ನಲ್ಲಿ ಸಂವಹನ ನಡೆಸಿದ ಹಾಗೂ ಆನ್‌ಲೈನ್‌ನಲ್ಲಿ ಗ್ರೂಮಿಂಗ್(online grooming) ಮಾಡಿದ ಆರೋಪದ ಮೇಲೆ ಯುಕೆಯ(UK) ಕವೆಂಟ್ರಿಯಲ್ಲಿ ಭಾರತೀಯ ವ್ಯಕ್ತಿಯೊಬ್ಬನನ್ನು(Indian man) ಬಂಧಿಸಲಾಗಿದೆ. ಗುರೀತ್ ಜೀತೇಶ್ ಎಂದು ಗುರುತಿಸಲಾದ ಈತ ಸುಮಾರು ಮೂರು ತಿಂಗಳ ಹಿಂದೆ ಬ್ರಿಟನ್‌ಗೆ ಆಗಮಿಸಿ ವಿದ್ಯಾರ್ಥಿ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದ.
ಸದ್ಯ ಆತ ಕ್ಷಮೆಯಾಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ರಾತ್ರಿ ಕವೆಂಟ್ರಿಯಲ್ಲಿ ಭಾರತೀಯ ವ್ಯಕ್ತಿ ಗುರೀತ್ ಜೀತೇಶ್ ಅವರನ್ನು ಆನ್‌ಲೈನ್‌ನಲ್ಲಿ ಹಲವಾರು ಅಪ್ರಾಪ್ತ ವಯಸ್ಸಿನ ಹುಡುಗಿರನ್ನು ಬಳಸಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಆತ 12 ವಾರಗಳಿಂದ ದೇಶದಲ್ಲಿದ್ದಾರೆ ಮತ್ತು ವಿದ್ಯಾರ್ಥಿ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈತನನ್ನು ಬಂಧಿಸುವ ವೇಳೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕ್ಷಮಿಸಿ, ದಯವಿಟ್ಟು. ದಯವಿಟ್ಟು ನನಗೆ ಒಂದು ಒಂದು ಅವಕಾಶ ನೀಡಿ ಎಂದು ಪೊಲೀಸರ ಬಳಿ ಜಿತೇಶ್ ಕೇಳಿಕೊಂಡಿದ್ದಾರೆ. ಮುಂದಿನ ಡಿಸೆಂಬರ್ ವೇಳೆ ಕೋರ್ಸ್ ಮುಗಿಯುತ್ತದೆ” ಅಲ್ಲಿವರೆಗೆ ಅವಕಾಶ ನೀಡಿ ಎಂದು ಬೇಡಿಕೊಂಡಿದ್ದಾನೆ.
Last night in Coventry
Indian man Gureet Jeetesh was confronted and arrested for grooming multiple underage girls online and arranging to meet them.
He has only been in the country for 12 weeks and lives in student accommodation. He was evicted and arrested. pic.twitter.com/kjNRwWB6tE
— This Is England (@EnglandThisIs) January 7, 2026
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದ್ದು, ಭಾರತದ ಬಳಕೆದಾರರು ವಿದ್ಯಾರ್ಥಿಗಳ ತಪಾಸಣೆ ಪ್ರಕ್ರಿಯೆಗಳು, ಆನ್‌ಲೈನ್ ಸುರಕ್ಷತೆ ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವ ವ್ಯಕ್ತಿಗಳ ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಯುಕೆ ಅಧಿಕಾರಿಗಳು ಇನ್ನೂ ಆರೋಪಗಳ ಕುರಿತು ಯಾವುದೇ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ. ಯುಕೆಯಲ್ಲಿ ಅಪ್ರಾಪ್ತ ವಯಸ್ಕರೊಂದಿಗೆ ಆನ್‌ಲೈನ್ ಸಂವಹನವನ್ನು ನಿಯಂತ್ರಿಸುವ ಕಠಿಣ ಕಾನೂನುಗಳಿವೆ ಮತ್ತು ಅಪರಾಧಗಳು ಸಾಬೀತಾದರೆ ಜೈಲು ಸೇರಬೇಕಾಗುತ್ತದೆ.
ಆನ್‌ಲೈನ್ ಗ್ರೂಮಿಂಗ್ ಎಂದರೇನು?
ಕಿರಿಯ ವಯಸಿನ / ಅಪ್ರಾಪ್ತರೊಡನೆ ಟೆಕ್ನಾಲಜಿಯ ನೆರವಿನಿಂದ ಸಂಬಂಧ ಬೆಳೆಸುವುದನ್ನು ಆನ್‌ಲೈನ್ ಗ್ರೂಮಿಂಗ್ ಎನ್ನುತ್ತಾರೆ. ಎಷ್ಟೋ ಮಂದಿ ಅಪ್ರಾಪ್ತ ಬಾಲಕಿಯರು ಈ ಚಟಕ್ಕೆ ಬಿದ್ದು ಮನೆ ಮತ್ತು ಪೋಷಕರನ್ನು ತೊರೆದು ಹೋಗಿರುವ ಘಟನೆಗಳು ನಡೆದಿವೆ.
ಹೀಗಾಗಿ ಹಲವು ದೇಶಗಳಲ್ಲಿ ಆನ್‌ಲೈನ್ ಗ್ರೂಮಿಂಗ್ ಗೆ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ.
ಇದನ್ನೂ ಓದಿ : ಅಪ್ಪನನ್ನು ನೋಡಲು ಬಂದ ಅಕ್ಕ – ಆಸ್ತಿಗಾಗಿ ಥಳಿಸಿದ ತಮ್ಮ! VIDEO