Wednesday, May 14, 2025
Homeಟಾಪ್ ನ್ಯೂಸ್INDIAN ARMY : ಪಾಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ - VIDEO

INDIAN ARMY : ಪಾಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ – VIDEO

ಜಮ್ಮು – ಕಾಶ್ಮೀರ : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ನಿಯಂತ್ರಣ ರೇಖೆ ಉದ್ದಕ್ಕೂ ಭಾರತೀಯ ದಾಳಿಯಲ್ಲಿ ಪಾಕಿಸ್ತಾನದ ಸೇನಾ ನೆಲೆ ನಾಶವಾದ ಮೊದಲ ದೃಶ್ಯವನ್ನು ಭಾರತೀಯ ಸೇನೆಯು ಹಂಚಿಕೊಂಡಿದೆ.

ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷದ ಭೀತಿಯ ನಡುವೆಯೂ, ಜಮ್ಮು ಮತ್ತು ಕಾಶ್ಮೀರದ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳು ರಾತ್ರಿಯಿಡೀ ಡ್ರೋನ್ ದಾಳಿ ನಡೆಸಲಾಗಿದ್ದು, ಭಾರತದ ಮಿಸೈಲ್ ದಾಳಿಗೆ ಪಾಕ್ ಅಕ್ಷರಶಃ ನಲುಗಿ ಹೋಗಿದೆ.

ಪಾಕ್ ನಡೆಸಿದ ಎಲ್ಲಾ ಷಡ್ಯಂತ್ರವನ್ನು ಹಿಮ್ಮೆಟ್ಟಿಸಿದ ನಂತರವು ಕೂಡ ಎಲ್ಒಸಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಗೆ ಸೂಕ್ತ ಉತ್ತರ ನೀಡಿದೆ. ಇದೀಗ ಪಾಕ್ ನ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದ ವಿಡಿಯೋವನ್ನು ಸೇನೆ ಹಂಚಿಕೊಂಡಿದೆ.

ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಪ್ರದೇಶಗಳಲ್ಲಿ ವಾಯು ರಕ್ಷಣಾ ಘಟಕಗಳು ನಡೆಸಿದ ದೊಡ್ಡ ಪ್ರಮಾಣದ ಪ್ರತಿ-ಡ್ರೋನ್ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಹಾರಿಸಿದ 50 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತೀಯ ಸೇನೆಯು ಒಂದೇ ಏಟಿಗೆ ಹೊಡೆದುರುಳಿಸಿದೆ.

ಇದೀಗ ಜಮ್ಮುವಿನ ನಾಗ್ರೋಟಾ ಸೆಕ್ಟರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಡ್ರೋನ್‌ಗಳನ್ನು ಹೊಡೆದುರುಳಿಸುವ ವಿಡಿಯೋವನ್ನು ಸೇನೆಯು ಹಂಚಿಕೊಂಡಿದ್ದು, ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ಉದ್ದೇಶಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂದು ಬರೆದುಕೊಂಡಿದೆ.

ಹೆಚ್ಚಿನ ಸುದ್ದಿ

error: Content is protected !!