ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಮಧ್ಯೆ, ಭಾರತವು ಜಮ್ಮು-ಕಾಶ್ಮೀರದ ಸಲಾಲ್ ಮತ್ತು ಬಗ್ಲಿಹಾರ್ ಜಲಾಶಯಗಳಿಂದ ಚಿನಾಬ್ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ. ಭಾರತದ ನಡೆಯಿಂದ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
#WATCH | Jammu and Kashmir: Latest visuals from Reasi’s Salal Dam built on Chenab River; 3 gates of the dam are seen open.
(Visuals shot at 4:45 pm today) pic.twitter.com/kkZlJ7PynZ
— ANI (@ANI) May 8, 2025
ಜಮ್ಮು-ಕಾಶ್ಮೀರದ ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಸಲಾಲ್ ಡ್ಯಾಂನಿಂದ 690 ಮೆಗಾ ವ್ಯಾಟ್, ಬಗ್ಲಿಹಾರ್ ಡ್ಯಾಂನಿಂದ 900 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದಿಸುತ್ತವೆ. ಆದರೆ, ನೀರನ್ನು ಬೇರೆಡೆ ತಿರುಗಿಸೋಕೂ ಆಗುತ್ತಿಲ್ಲ. ಆದ್ದರಿಂದ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ.
#WATCH | Jammu and Kashmir: Two gates at the Baglihar Hydroelectric Power Project Dam built on the Chenab River in Ramban have been opened.
(Latest visuals from the spot; shot at 3 pm today) pic.twitter.com/g6oYhT1BHb
— ANI (@ANI) May 8, 2025
ಭಾರತದ ನಡೆಯಿಂದ ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್, ಗುಜ್ರಾನ್‌ವಾಲಾ, ಮತ್ತು ಲಾಹೋರ್‌ನಂತಹ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ಚಿನಾಬ್ ನದಿಯ ನೀರಿನ ಮಟ್ಟವು ಗಣನೀಯವಾಗಿ ಏರಿಕೆಯಾಗಿದೆ.