ಮುಂಬೈ: ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈನ ಜಿಯೊ ವರ್ಲ್ಡ್ ಡ್ರೈವ್ ಮಾಲ್ ನಲ್ಲಿ ಪ್ರಾರಂಭವಾಗಲಿದ್ದು, ಮಳಿಗೆ ಹೇಗಿರಲಿದೆ ಎನ್ನುವ ಚಿತ್ರವನ್ನು ಬುಧವಾರ ಆಪಲ್ ಬಿಡುಗಡೆ ಮಾಡಿದೆ.
‘ಆಪಲ್ ಬಿಕೆಸಿ‘ ಎಂದು ಸ್ಟೋರ್‌ಗೆ ಹೆಸರಿಡಲಾಗಿದೆ. ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು–ಹಳದಿ ಟಾಕ್ಸಿ‘ಯಿಂದ ಪ್ರೇರಣೆಗೊಂಡಿದೆ.
ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ‘ಹಲೋ ಮುಂಬೈ‘ ಎಂದು ಬರೆಯಲಾಗಿದೆ.
ಏಪ್ರಿಲ್ ತಿಂಗಳಿನಲ್ಲಿಯೇ ಮಳಿಗೆ ಉದ್ಘಾಟನೆಯಾಗಲಿದೆ. ಇದಾದ ಬಳಿಕ ಎರಡನೇ ಮಳಿಗೆ ದೆಹಲಿಯಲ್ಲಿ ತೆರೆಯಲಾಗುತ್ತದೆ ಎಂದು ಮಾಹಿತಿ ಲಭಿಸಿದೆ.
ದೇಶದ ಮೊದಲ ಸ್ಟೋರ್ ಉದ್ಘಾಟನೆಯನ್ನು ಸಂಭ್ರಮಿಸಲು, ಆಪಲ್ ಬಳಕೆದಾರರು ’ಆಪಲ್ ಬಿಕೆಸಿ‘ ವಾಲ್‌ಪೇಪರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ಆಪಲ್ ಮ್ಯೂಸಿಕ್‌ನಲ್ಲಿ ಹೊಸ ಪ್ಲೇಲಿಸ್ಟ್ ನಲ್ಲಿ ಕೂಡ ಕಾಣಬಹುದಾಗಿದೆ.