Wednesday, May 14, 2025
Homeಟಾಪ್ ನ್ಯೂಸ್IND-PAK WAR: ಈ ಪಾಕಿಸ್ತಾನದ ಕಥೆ ನೋಡಿ - ವಿಡಿಯೋ ಗೇಮ್‌ ದೃಶ್ಯ ಹಂಚಿಕೊಂಡು ಯುದ್ಧದ...

IND-PAK WAR: ಈ ಪಾಕಿಸ್ತಾನದ ಕಥೆ ನೋಡಿ – ವಿಡಿಯೋ ಗೇಮ್‌ ದೃಶ್ಯ ಹಂಚಿಕೊಂಡು ಯುದ್ಧದ ದೃಶ್ಯ ಎಂದ ಪಾಕ್ !

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಯುದ್ಧವೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಈಗ ತಪ್ಪು ಮಾಹಿತಿಯ ಅಭಿಯಾನವೇ ವ್ಯಾಪಕವಾಗಿವೆ. ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಜನರನ್ನು ದಾರಿ ತಪ್ಪಿಸುವ ಎಲ್ಲಾ ಪ್ರಯತ್ನಗಳನ್ನು ಪಾಕಿಸ್ತಾನ ಮಾಡುತ್ತಿದ್ದು, ಇದನ್ನು ತಡೆಯಲು ಪತ್ರಿಕಾ ಮಾಹಿತಿ ಬ್ಯೂರೋ (PIB) ಎಲ್ಲಾ ಪ್ರಯತ್ನ ಮಾಡುತ್ತಿದೆ.

ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ಭಾರೀ ವೈರಲಾಗಿದೆ. ಭಾರೀ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ಸ್ (MLRS) ನಿಂದ ರಾಕೆಟ್‌ಗಳ ಸುರಿಮಳೆಯಾಗುತ್ತಿರುವ ವೀಡಿಯೊವೊಂದು ವೈರಲ್ ಆಗುತ್ತಿದೆ. ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಿರುವ ವೀಡಿಯೊ ಇದಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಸದ್ಯ ಪಿಐಬಿ ಸತ್ಯ ಪರಿಶೀಲನೆಯಿಂದ ಈ ವೀಡಿಯೊವಿನ ಸತ್ಯಾಸತ್ಯತೆ ಬಯಲಿಗೆ ಬಂದಿದೆ. ಈ ದೃಶ್ಯಾವಳಿಗಳು ವೀಡಿಯೊ ಗೇಮ್‌ನಿಂದ ಬಂದಿದ್ದು, ಮೂರು ವರ್ಷಗಳಿಂದ ಆನ್‌ಲೈನ್‌ನಲ್ಲಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಹೆಚ್ಚಿನ ಸುದ್ದಿ

error: Content is protected !!