Thursday, March 27, 2025
Homeಟಾಪ್ ನ್ಯೂಸ್ಮತ್ತೆ ಕೊರೋನ ಹಾವಳಿ: ಕೋವಿಡ್ ಪ್ರಕರಣಗಳು 5 ತಿಂಗಳಲ್ಲೇ ಅಧಿಕ

ಮತ್ತೆ ಕೊರೋನ ಹಾವಳಿ: ಕೋವಿಡ್ ಪ್ರಕರಣಗಳು 5 ತಿಂಗಳಲ್ಲೇ ಅಧಿಕ

ನವದೆಹಲಿ: ಭಾರತದಲ್ಲಿ ಹೊಸ 2,151 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದು 5 ತಿಂಗಳಲ್ಲೇ ಅಧಿಕ ಎನ್ನಲಾಗಿದೆ. ದೇಶಾದ್ಯಂತ 11,903 ಕೊರೋನ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶ ತಿಳಿಸಿದೆ.

ಈ ವೈರಸ್ ನಿಂದ 7 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ, 5,30,848ಕ್ಕೇರಿದ್ದು, ಮಹಾರಾಷ್ಟ್ರದಲ್ಲಿ 3, ಕರ್ನಾಟಕದಲ್ಲಿ ಒಂದು ಮತ್ತು ಕೇರಳದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ.

ಪ್ರತಿದಿನ ಪಾಸಿಟಿವ್ ಆಗುತ್ತಿರುವ ಪ್ರಮಾಣ 1.51 ಶೇಕಡಾದಷ್ಟಿದ್ದು, ಪ್ರತಿ ವಾರ ಈ ಪ್ರಮಾಣ ಸದ್ಯ 1.53 ಶೇಕಡಾದಲ್ಲಿದೆ.

ಈ ಒಟ್ಟು ಹೊಸ ಪ್ರಕರಣಗಳ ಕಾರಣ ಕೊರೋನ ಬಿಕ್ಕಟ್ಟಿನ ನಂತರ ಕೋವಿಡ್ ಸೋಂಕಿಗೊಳಗಾದವರ ಸಂಖ್ಯೆ 4.47 ಕೋಟಿಗೆ ತಲುಪಿದ್ದು, ಇದೇ ಸಂದರ್ಭ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ 98.78 ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹೆಚ್ಚಿನ ಸುದ್ದಿ

error: Content is protected !!