ನವದೆಹಲಿ: ಇಂದು ರಾಮಭಕ್ತ ಹನುಮನ ಜಯಂತಿ. ದೇಶಾದ್ಯಂತ ಹನುಮಜಯಂತಿಯನ್ನು ಜನ ಭಕ್ತಿಯಿಂದ ಆಚರಿಸುತ್ತಿದ್ದಾರೆ. ದೇಶಾದ್ಯಂತ ವಿವಿಧೆಡೆ ಹನುಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹನುಮನಿಗೆ ತರಹೇವಾರಿ ಅಲಂಕಾರ ಮಾಡಲಾಗಿದೆ. ದೆಹಲಿ, ಪ್ರಯಾಗ್‌ರಾಜ್ ಸೇರಿದಂತೆ ಹಲವು ಕಡೆ ಹನುಮ ಜಯಂತಿ ಅಂಗವಾಗಿ ಭಕ್ತರು ದೇವಾಲಯಕ್ಕಾಗಮಿಸಿ ದೇವರ ಕೃಪೆಗೆ ಪಾತ್ರರಾಗ್ತಿದ್ದಾರೆ.