Monday, June 15, 2026
Homeಟಾಪ್ ನ್ಯೂಸ್BIG NEWS : ಭಾರತ-ನೆದರ್​​​​​​​​ಲೆಂಡ್ಸ್​​ ಸಹಭಾಗಿತ್ವ, ಸೆಮಿಕಂಡಕ್ಟರ್ & ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವದ ಒಪ್ಪಂದ

BIG NEWS : ಭಾರತ-ನೆದರ್​​​​​​​​ಲೆಂಡ್ಸ್​​ ಸಹಭಾಗಿತ್ವ, ಸೆಮಿಕಂಡಕ್ಟರ್ & ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವದ ಒಪ್ಪಂದ

ನೆದರ್‌ಲ್ಯಾಂಡ್ಸ್: ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸಾಧಿಸುವ ನಿಟ್ಟಿನಲ್ಲಿ ಭಾರತ (India) ಮತ್ತು ನೆದರ್‌ಲ್ಯಾಂಡ್ಸ್ (Netherlands) ದೇಶಗಳು ಮಹತ್ವದ ಹೆಜ್ಜೆ ಇಟ್ಟಿವೆ. ಇತ್ತೀಚೆಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ (Bilateral talks) ಉಭಯ ದೇಶಗಳು ಸೆಮಿಕಂಡಕ್ಟರ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ (Semiconductor & quantum computing) ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡಲು ಸಮ್ಮತಿಸಿವೆ. ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವಿನ ತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ : ನೆದರ್​​​​​​​ಲೆಂಡ್​​​​​​​​ನಲ್ಲಿ ಮೊಳಗಿದ ಭಾರತೀಯ ಕಲೆ, ಪ್ರಧಾನಿ ಮೋದಿಗೆ ಅನಿವಾಸಿ ಭಾರತೀಯರಿಂದ ಭವ್ಯ ಸ್ವಾಗತ

ಈ ಜಂಟಿ ಯೋಜನೆಯಡಿ ಎರಡೂ ದೇಶಗಳ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಕೈಗಾರಿಕಾ ಸಂಸ್ಥೆಗಳು ಒಟ್ಟಾಗಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲಿವೆ. ತಂತ್ರಜ್ಞಾನದ ವಿನಿಮಯ, ಜಂಟಿ ಯೋಜನೆಗಳ ಅನುಷ್ಠಾನ ಮತ್ತು ನಾವೀನ್ಯತೆಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಇದು ಭವಿಷ್ಯದ ಡಿಜಿಟಲ್ ಅಗತ್ಯತೆಗಳನ್ನು ಪೂರೈಸಲು ಸಹಕಾರಿಯಾಗಲಿದೆ.

ಈ ಒಪ್ಪಂದದ ಅತ್ಯಂತ ನಿರ್ಣಾಯಕ ಭಾಗವೆಂದರೆ, ಜಾಗತಿಕವಾಗಿ ಸೆಮಿಕಂಡಕ್ಟರ್ (ಚಿಪ್ಸ್) ಕೊರತೆ ಎದುರಾಗುತ್ತಿರುವ ಈ ಸಂದರ್ಭದಲ್ಲಿ, ಭಾರತವು ಸ್ವಾವಲಂಬನೆ ಸಾಧಿಸಲು ನೆದರ್‌ಲ್ಯಾಂಡ್ಸ್‌ನ ಸುಧಾರಿತ ತಂತ್ರಜ್ಞಾನದ ನೆರವು ಸಿಗಲಿದೆ. ವಿಶೇಷವಾಗಿ ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಜಾಗತಿಕ ಪೂರೈಕೆ ಸರಪಳಿಯನ್ನು (Supply Chain) ಬಲಪಡಿಸಲು ಮತ್ತು ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಕಾರ್ಯತಂತ್ರದ ಒಪ್ಪಂದವು ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!