Wednesday, May 14, 2025
Homeಕ್ರೀಡೆIND Vs PAK: ದುಬೈನಲ್ಲಿ PSL ನಡೆಸಲು ಮುಂದಾದ ಪಾಕ್‌ಗೆ ಭಾರೀ ಮುಖಭಂಗ..!

IND Vs PAK: ದುಬೈನಲ್ಲಿ PSL ನಡೆಸಲು ಮುಂದಾದ ಪಾಕ್‌ಗೆ ಭಾರೀ ಮುಖಭಂಗ..!

ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಹಾಗೂ ಪಾಕಿಸ್ತಾನ ಸೂಪರ್ ಲೀಗ್ (PSL) ಈ ಎರಡು ಪ್ರಮುಖ ಕ್ರಿಕೆಟ್ ಲೀಗ್‌ಗಳ ಮೇಲೆ ನೇರ ಪರಿಣಾಮ ಬೀರಿದೆ.

ಸದ್ಯದ ಪರಿಸ್ಥಿತಿಯಿಂದಾಗಿ ಈಗಾಗಲೇ ಭಾರತ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಮುಂದೂಡಿದೆ. ಆದರೆ ಇತ್ತ ಪಾಪಿ ಪಾಕಿಸ್ತಾನ ಮಾತ್ರ ತನ್ನ ಮುಂದಿನ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುವುದಾಗಿ ಹೇಳಿಕೊಂಡಿದೆ.

ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯುಎಇಗೆ ಮಾಡಿದ್ದು, ಆದರೆ ಈ ಮನವಿಯನ್ನು ಅಲ್ಲಿನ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಒಂದು ವೇಳೆ ಯುಎಇ ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸಿದ್ದೇ ಆದರೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಲಿದೆ.

ವರದಿಯ ಪ್ರಕಾರ, ಯುಎಇ ಕ್ರಿಕೆಟ್ ಮಂಡಳಿಯು ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತಮ್ಮ ದೇಶದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಕೆಯಿಂದ ಇದೆ ಎಂದು ವರದಿಯಾಗಿದೆ. ಸದ್ಯ ಪಿಸಿಬಿ ಮನವಿಗೆ ಸ್ಪಂದಿಸಿ ಪಿಎಸ್‌ಎಲ್ ಆಯೋಜಿಸಲು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಯುಎಇ ಪಾಕಿಸ್ತಾನ ಸ್ನೇಹಿ ರಾಷ್ಟ್ರ ಎಂಬ ಹಣೆಪಟ್ಟಿಗೆ ಒಳಗಾಗುವ ಸಾಧ್ಯತೆಗಳಿವೆ. ಈ ಆತಂಕದಿಂದಾಗಿ ಪಿಎಸ್‌ಎಲ್ ಆಯೋಜಿಸಲು ಯುಎಇ ಹಿಂದೇಟು ಹಾಕಿದೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!