ವಿಜಯಪುರ : ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಗ್ರಾಮಸ್ಥರೇ ಬಲೆ ಹಾಕಿ ಸೆರೆ ಹಿಡಿದು ಶೌರ್ಯ ಮೆರೆದಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಮಣ ಅಂಕಲಗಿಯಲ್ಲಿ ಇಂದು ನಡೆದಿದೆ.
ಗ್ರಾಮಕ್ಕೆ ನುಗ್ಗಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಗ್ರಾಮಸ್ಥರೇ ಸೇರಿಕೊಂಡು ಅಟ್ಟಾಡಿಸಿ ಬಲೆ ಬೀಸುವ ಮೂಲಕ ಚಿರತೆಯನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇನ್ನು ಚಿರತೆ ಸೆರೆಹಿಡಿಯುವಾಗ ಸುಮಾರು ನಾಲ್ವರ ಮೇಲೆ ದಾಳಿ ಮಾಡಿದೆ. ಗಾಯಾಳುಗಳನ್ನು ಚಡಚಣ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.