Monday, April 13, 2026
Homeಟಾಪ್ ನ್ಯೂಸ್PAHALGAM : ಜಮ್ಮು & ಕಾಶ್ಮೀರದಲ್ಲಿ ಮೇಘಸ್ಫೋಟ - ಉಗ್ರರ ದಾಳಿ ನಡೆದಿದ್ದ ಪಹಲ್ಗಾಮ್ ನಲ್ಲಿ...

PAHALGAM : ಜಮ್ಮು & ಕಾಶ್ಮೀರದಲ್ಲಿ ಮೇಘಸ್ಫೋಟ – ಉಗ್ರರ ದಾಳಿ ನಡೆದಿದ್ದ ಪಹಲ್ಗಾಮ್ ನಲ್ಲಿ ರಣಪ್ರವಾಹ : VIDEO

ಕಾಶ್ಮೀರ: ಕಣಿವೆನಾಡು ಜಮ್ಮು ಕಾಶ್ಮೀರದಲ್ಲಿ (Jammu Kashmir) ಮಳೆಯ ರೌದ್ರಾವತಾರಕ್ಕೆ ಜನ ಅಕ್ಷರಶಃ ತತ್ತರಿಸಿ ಹೊಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವರ ಬದುಕು ಬೀದಿಗೆ ಬಿದ್ದಿದೆ. ಇನ್ನೂ ಮಳೆಯ ಆರ್ಭಟ ಮುಂದುವರೆದಿದ್ದು, ಪ್ರವಾಹದಿಂದ (Flash flood) ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.ಈ ಮಧ್ಯೆ ಉಗ್ರರ ದಾಳಿಯಿಂದ (Terrorist attack) ಸುದ್ದಿಯಾಗಿದ್ದ ಮತ್ತೊಮ್ಮೆ ಪಹಲ್ಗಾಮ್ (Pahalgam) ಈಗ ಪ್ರವಾಹಕ್ಕೆ ತತ್ತರಿಸಿ ಹೋಗಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ – ಏಳು ಮಂದಿ ಸಾವು, ಹಲವರು ನಾಪತ್ತೆ!

ಹೌದು, 2025 ರ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ದಾಳಿ ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಭೂಲೋಕದ ಸ್ವರ್ಗ ಎಂದೇ ಕರೆಯುವ ಪ್ರವಾಸಿ ತಾಣವನ್ನು ನೋಡಲು ತೆರಳಿದ್ದು ಜನ ಉಗ್ರರ ಗುಂಡಿಗೆ ಬಲಿಯಾಗಿದ್ದರು.ಈ ಭಯೋತ್ಪಾದಕ ಕೃತ್ಯದಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಪಾಕ್ ಪೋಷಿತ ಉಗ್ರ ಕೃತ್ಯದ ವಿರುದ್ಧ ಭಾರತ ಸಿಡಿದೆದ್ದಿತ್ತು.

ಇದೀಗ ಈ ಪಹಲ್ಗಾಮ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನದಿಗಳು ಅಪಾಯಕಾರಿಯಾಗಿ ಧುಮ್ಮಿಕ್ಕಿ ಹರಿಯುತ್ತಿದ್ದು ಎದೆ ಝಲ್ ಎನ್ನುವಂತಿದೆ.ಈ ಪ್ರವಾಹದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇನ್ನು ಜಮ್ಮು ಮತ್ತು ಕಾಶ್ಮೀರದ ಅನ್ನೂರ್ ನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಚಿನಾಬ್ ನದಿ ಪ್ರವಾಹ ಸ್ಥಿತಿ ನಿರ್ಮಾಣ ಮಾಡಿದೆ.ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಐತಿಹಾಸಿಕ ಜಿಯಾ ಪೋಟಾ ಘಾಟ್ ದೇವಾಲಯ ಮುಳುಗಡೆಯಾಗಿದೆ. ನದಿ ಪಾತ್ರದ ಜನರಿಗೆ ನದಿ ಇಳಿಯದಂತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

26 ಪ್ರವಾಸಿಗರ ಜೀವ ತೆಗೆದಿದ್ದ ಭಯೋತ್ಪಾದಕರ ಹತ್ಯೆ

ಪ್ರವಾಸಿ ತಾಣವನ್ನು ರಕ್ತಸಿಕ್ತಗೊಳಿಸಿ 26 ಭಾರತೀಯರ ಬಲಿ ಪಡೆದಿದ್ದ ಉಗ್ರರನ್ನು ಭಾರತೀಯ ಸೇನೆ ಮಟ್ಟ ಹಾಕಿದೆ. ಮೂವರು ಪಾಕಿಸ್ತಾನಿಗಳು ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ಸೇರಿದ್ದ ರಕ್ತಪಿಪಾಸುಗಳನ್ನು ಸೇನೆ ಹೊಡೆದುರುಳಿಸಿ ಸೇಡು ತೀರಿಸಿಕೊಂಡಿದ್ದಾಗಿದೆ.

ಆಪರೇಷನ್‌ ಮಹಾದೇವ್‌ ಮೂಲಕ ಉತ್ತರ

ಆಪರೇಷನ್‌ ಸಿಂಧೂರದ ಮುಖಾಂತರ ಪಾಕ್‌ ನೆಲಕ್ಕೆ ನುಗ್ಗಿ ಉಗ್ರ ಶೀಬಿರಗಳನ್ನು ಉಡೀಸ್‌ ಮಾಡಿದ್ದ ಭಾರತ ಜಮ್ಮು ಮತ್ತು ಕಾಶ್ಮೀರದ ದಾರಾ ಬಳಿಯ ಲಿಡ್ವಾಸ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಆಪರೇಷನ್‌ ಮಹಾದೇವ್‌ ಆರಂಭಿಸಿತು.

ಡಚಿಗಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಹರ್ವಾನ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದು ಈ ಕಾರ್ಯಾಚರಣೆಯಲ್ಲಿ ಭಾರತದ ಅಮೂಲ್ಯ ಜೀವಗಳನ್ನು ತೆಗೆದಿದ್ದ ಉಗ್ರರನ್ನು ಹತ್ಯೆಗೈದು ಉಗ್ರರಿಗೆ ಪಾಠ ಕಲಿಸಿತು

ಹೆಚ್ಚಿನ ಸುದ್ದಿ

Change Language »
error: Content is protected !!