Tuesday, May 19, 2026
Homeಟಾಪ್ ನ್ಯೂಸ್BENGALURU: ಗಣೇಶ ವಿಸರ್ಜನೆ ವೇಳೆ ಪಟಾಕಿ ದುರಂತ - ಗಾಯಗೊಂಡಿದ್ದ ಬಾಲಕ ಸಾ*ವು!

BENGALURU: ಗಣೇಶ ವಿಸರ್ಜನೆ ವೇಳೆ ಪಟಾಕಿ ದುರಂತ – ಗಾಯಗೊಂಡಿದ್ದ ಬಾಲಕ ಸಾ*ವು!

ಬೆಂಗಳೂರು: (Bengaluru)ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ಮುತ್ತೂರಿನಲ್ಲಿ ನಡೆದ ದುರಂತ ಘಟನೆ ಸ್ಥಳೀಯರನ್ನು ತತ್ತರಗೊಳಿಸಿದೆ. ಗಣೇಶ ವಿಸರ್ಜನೆ (Ganesha Visarjan)ವೇಳೆ ಪಟಾಕಿ ಸಿಡಿದು ಗಾಯಗೊಂಡಿದ್ದ 15 ವರ್ಷದ ಬಾಲಕ ಯೋಗೇಶ್ ಸಾವನ್ನಪ್ಪಿದ್ದಾನೆ. ಒಂದು ಸಣ್ಣ ತಪ್ಪು ಇಡೀ ಕುಟುಂಬಕ್ಕೆ ಜೀವನವಿಡೀ ಕೊರಗುವಂತೆ ಮಾಡಿದೆ.

ಗಂಭೀರ ಅಸ್ವಸ್ಥಗೊಂಡ ಯೋಗೇಶ್ ನನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲ್ಪಟ್ಟರೂ, ಚಿಕಿತ್ಸೆ ಫಲಿಸದೆ ಇಂದು ಬಾಲಕ ಯೋಗೇಶ್ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು,  ಪಟಾಕಿ ಸ್ಪೋಟ ದುರಂತದಿಂದ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಪೋಷಕರು ಮಗನನ್ನು ಕಳೆದುಕೊಂಡ ನೋವನ್ನು ತಾಳಲಾರದೇ ಆಕ್ರಂದನ ಮಾಡುತ್ತಿದ್ದಾರೆ. ಸ್ಥಳೀಯರು ಕೂಡ ಈ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಚಿಕಿತ್ಸಾ ವೇಳೆ ಹೆಚ್ಚು ಎಚ್ಚರಿಕೆ ವಹಿಸಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದಿದ್ದಾರೆ.

ಬಾಲಕನ ಸಾವಿನ ಸುದ್ದಿ ಗ್ರಾಮದಲ್ಲಿ ದುಃಖದ ವಾತಾವರಣವನ್ನು ಮೂಡಿಸಿದೆ. ಶಾಲಾ ಸ್ನೇಹಿತರು, ನೆರೆಹೊರೆಯವರು ಎಲ್ಲರೂ ತೀವ್ರ ಆಘಾತಗೊಂಡಿದ್ದಾರೆ. ಜನರು ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ. ಈ ಘಟನೆ ಎಲ್ಲರಿಗೂ ಎಚ್ಚರಿಕೆಯ ಗಂಟೆ. ವೈದ್ಯಕೀಯ ಚಿಕಿತ್ಸೆ ಪಡೆಯುವಾಗ ಔಷಧಿ ಸೇವನೆ, ಅದರ ಸರಿಯಾದ ಪ್ರಮಾಣ, ಬಳಕೆ ಎಲ್ಲದರಲ್ಲೂ ಜಾಗ್ರತೆ ಅಗತ್ಯ. ಇಂತಹ ಅಸಾವಧಾನತೆ ಜೀವಕ್ಕೆ ಬೆಲೆ ಕಟ್ಟುವ ಸ್ಥಿತಿಯನ್ನು ತರಬಾರದು ಎಂಬುದೇ ಎಲ್ಲರ ಮಾತು. ಈ ಘಟನೆ ಒಂದು ಕುಟುಂಬವನ್ನೇ ದುರಂತಕ್ಕೆ ತಳ್ಳಿತು. 15 ವರ್ಷದ ಯೋಗೇಶ್ ಬದುಕು ಅಕಾಲದಲ್ಲಿ ನಿಂತುಹೋಗಿದೆ. ಇದು ವೈಯಕ್ತಿಕ ನೋವು ಮಾತ್ರವಲ್ಲ, ಸಮಾಜಕ್ಕೆ ಎಚ್ಚರಿಕೆಯ ಸಂಕೇತವೂ ಆಗಿದೆ.

ಪ್ರತ್ಯೇಕ ಪ್ರಕರಣ ಘಟನೆಯಲ್ಲಿ 

ವಿಜಯಪುರದ (Vijayapur) ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ಗಣೇಶ ವಿಸರ್ಜನೆ (Ganesh visarjan) ವೇಳೆ ವಿದ್ಯುತ್ ಪ್ರವಹಿಸಿ (Current Shock) ಯುವಕನೋರ್ವ ಸಾವನ್ನಪ್ಪಿದ್ದರೆ, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೋಲಾಪುರದ ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಎನ್ನಲಾಗಿದೆ.

ಇದ್ದನ್ನು ಓದಿ: ಬೆಂಗಳೂರಿನಲ್ಲಿ ಗಣೇಶ ಹಬ್ಬ- ಜೆಪ್ಟೋ ಆರ್ಡರ್‌ಗಳಲ್ಲಿ ಗಮನಾರ್ಹ ಏರಿಕೆ

ಗಣೇಶ ವಿಸರ್ಜನೆಯ ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಮೇಲಕ್ಕೆ ಎತ್ತುತ್ತಿದ್ದರು. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಶುಭಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಡಿಜೆ ಆಪರೇಟರ್ ಪ್ರಭಾಕರ್ ಎಂಬಾತನಿಗೆ ಹಾಗೂ ಶ್ರೀಕಾಂತ್ ಎಂಬುವವರಿಗೆ ಕೂಡ ಕರೆಂಟ್ ಶಾಕ್ ಹೊಡೆದು ಗಂಭೀರ ಗಾಯಗೊಂಡಿದ್ದಾರೆ.

ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಗಾಂಧಿಚೌಕ್ ಪೊಲೀಸ್ ಠಾಣಾಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಪ್ರತ್ಯೇಕ ಪ್ರಕರಣ ಘಟನೆಯಲ್ಲಿ 

ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಘಾತ  ಸಂಭವಿಸಿ ಸಾವನ್ನಪ್ಪಿರುವವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಇದೀಗ ರಾಯಚೂರು ನಗರದಲ್ಲಿ ಗಣೇಶ ಮೆರವಣಿಗೆಯ ವೇಳೆ ಡಾನ್ಸ್ ಮಾಡುತ್ತಿರುವಾಗಲೇ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಅಭಿಷೇಕ್ (24) ಎಂದು ಗುರುತಿಸಲಾಗಿದೆ. ರಾಯಚೂರು ನಗರದಲ್ಲಿ ಆ.31ರ ರಾತ್ರಿಯಿಡೀ ಡಿಜೆ ಹಾಡಿಗೆ ಡಾನ್ಸ್ ಮಾಡಿದ ಅಭಿಷೇಕ್ ಸೆ.1ರಂದು ಬೆಳಗಿನ ಜಾವ ಗಣೇಶ ವಿಸರ್ಜನೆ ಮಾರ್ಗ ಮಧ್ಯೆ ತೀನ್ ಖಂದಿಲ್ ಸರ್ಕಲ್ ಬಳಿ ಧಿಡೀರ್ ಆಗಿ ಕುಸಿದು ಬಿದ್ದಿದ್ದಾನೆ.

ಹೆಚ್ಚಿನ ಸುದ್ದಿ

Change Language »
error: Content is protected !!