ದಾವಣಗೆರೆ: ಯಾವುದೇ ದಾಖಲೆಯಿಲ್ಲದ 7.5 ಲಕ್ಷ ರೂ. ಹಣವನ್ನು ಸೊಂಟದಲ್ಲಿ ಕಟ್ಟಿಕೊಂಡು ಸಾಗಿಸುತ್ತಿದ್ದ ಇಬ್ಬರು ಆಸಾಮಿಗಳು ಚುನಾವಣಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೋಸ್ಟ್‍ನಲ್ಲಿ ಬೈಕ್‍ನಲ್ಲಿ ಸಾಗುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತಪಾಸಣೆ ನಡೆಸಿದಾಗ ಈ ಅಕ್ರಮ ಬಯಲಾಗಿದೆ.
ಶಿವಮೊಗ್ಗ ಶಿಕಾರಿಪುರ ಮೂಲದ ಸೈಫುಲ್ಲಾ ಮತ್ತು ಕುಮಾರ್ ಬುಧವಾರ ರಾತ್ರಿ ಚೆಕ್‍ಪೋಸ್ಟ್ ಮೂಲಕ ಸಾಗುತ್ತಿದ್ದರು. ಈ ವೇಳೆ ಸಾಮಾನ್ಯದಂತೆ ಪೊಲೀಸರು ತಪಾಸಣೆಗೆ ತೊಡಗಿದ್ದರು. ಈ ವೇಳೆ ತಪಾಸಾಣಾಧಿಕಾರಿಗಳ ಪ್ರಶ್ನೆಗೆ ಇಬ್ಬರೂ ಗೊಂದಲದ ಉತ್ತರ ನೀಡಿದ್ದರು. ಆಗ ಇವರ ಮೇಲೆ ಅನುಮಾನಗೊಂಡ ಅಧಿಕಾರಿಗಳು ಸಂಪೂರ್ಣ ಜಪ್ತಿ ನಡೆಸಿದಾಗ ಅಕ್ರಮ ಬಯಲಾಗಿದೆ. ಸಧ್ಯಕ್ಕೆ ಬಂಧಿತರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.