Thursday, March 27, 2025
Homeಬೆಂಗಳೂರುಕೆರೆ ಮಧ್ಯೆ ಅಕ್ರಮ ರಸ್ತೆ ನಿರ್ಮಾಣ - ಜೆಡಿಎಸ್ ಆರೋಪ

ಕೆರೆ ಮಧ್ಯೆ ಅಕ್ರಮ ರಸ್ತೆ ನಿರ್ಮಾಣ – ಜೆಡಿಎಸ್ ಆರೋಪ

ಅಪಾರ್ಟ್‌ಮೆಂಟ್ ಒಂದರ ಮೌಲ್ಯ ಹೆಚ್ಚಿಸುವ ಸಲುವಾಗಿ ಬಿಬಿಎಂಪಿ ಹೊಸಕೆರೆಹಳ್ಳಿ ಕೆರೆಯ ಮಧ್ಯೆ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಯಾವುದೋ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ ಎಂದು ಟೀಕಿಸಿದೆ.
ಕೆರೆಗಳು ನಗರದ ಜೀವಸೆಲೆ, ಅದನ್ನು ರಕ್ಷಿಸಬೇಕೆ ವಿನಃ ಹಾಳುಗೆಡವುವುದಲ್ಲ. ಕೆರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ, ಆದರೆ ಕೆರೆ ಇನ್ನೂ ದುರ್ನಾತ ಬೀರುತ್ತಿದೆ. ಕೆರೆಗೆ ಈಗಾಗಲೆ ಖರ್ಚು ಮಾಡಲಾದ ಹಣವನ್ನು ಏನು ಮಾಡಲಾಗಿದೆ ಎಂದು ಪ್ರಶ್ನಿಸಿರುವ ಜೆಡಿಎಸ್,
ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಬಿಬಿಎಂಪಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅನುಮೋದನೆ ಕೂಡಾ ಪಡೆದಿಲ್ಲ ಎಂಬ ವರದಿಯಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಕಮಿಷನ್ ದಂಧೆ ಬಿಟ್ಟು ಇತ್ತ ಕಡೆ ತಲೆ ಹಾಕಿ. ಕಾನೂನು ಮುರಿದು ಕೆರೆ ಮಧ್ಯೆ ರಸ್ತೆ ನಿರ್ಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಸವಾಲೆಸೆದಿದೆ.

ಹೆಚ್ಚಿನ ಸುದ್ದಿ

error: Content is protected !!