Monday, August 17, 2026
Homeಟಾಪ್ ನ್ಯೂಸ್RECIPE: ತಿಂಡಿ ತಿನ್ನೋಕೆ ಟೈಮ್ ಇಲ್ವಾ- ಆಪಲ್‌, ಕಿವಿ ಬಳಸಿ ಗ್ರೀನ್ ಸ್ಮೂಥಿ ಮಾಡಿ ಸೇವಿಸಿ

RECIPE: ತಿಂಡಿ ತಿನ್ನೋಕೆ ಟೈಮ್ ಇಲ್ವಾ- ಆಪಲ್‌, ಕಿವಿ ಬಳಸಿ ಗ್ರೀನ್ ಸ್ಮೂಥಿ ಮಾಡಿ ಸೇವಿಸಿ

ಹೆಚ್ಚಾಗಿ ಆಫೀಸ್‌ಗೆ ಹೋಗಲು ತಡವಾದಾಗ, ಉಪಹಾರ (Breakfast) ತಯಾರಿಸಿ ತಿನ್ನುವಷ್ಟು ನಿಮ್ಮ ಬಳಿ ಹೆಚ್ಚು ಟೈಂ ಇಲ್ಲ ಎಂದರೆ ಆಗ ಹೊಟ್ಟೆ ತುಂಬಿಸಿಕೊಳ್ಳಲು ಬೆಸ್ಟ್‌ ಆಪ್ಶನ್‌ ವಿವಿಧ ಹಣ್ಣುಗಳಿಂದ ತಯಾರಿಸಿದ ಸ್ಮೂಥಿ. ಇದು ಬೆಳಗ್ಗಿನ ಉಪಹಾರದಂತೆಯೇ ಹೊಟ್ಟೆ ತುಂಬಿದಂತೆ ಮಾಡುವುದರೊಂದಿಗೆ ಅಗತ್ಯ ಆರೋಗ್ಯಕರ ಪೋಷಕಾಂಶವನ್ನೂ ಒದಗಿಸುತ್ತದೆ. ನಾವಿಂದು ಆಪಲ್‌, ಕಿವಿ, ಅವಕಾಡೋ ಬಳಸಿ ಹಸಿರು ಸ್ಮೂಥಿ (Green Smoothie) ಹೇಗೆ ತಯಾರಿಸುವುದೆಂದು ಹೇಳಿಕೊಡುತ್ತೇವೆ. ನೀವೊಮ್ಮೆ ಇದನ್ನು ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
* 1 ಕಪ್‌ ಹಾಲು
* 1 ಹೆಚ್ಚಿದ ಹಸಿರು ಆಪಲ್‌
* 2 ಸಿಪ್ಪೆ ತೆಗೆದು ಹೆಚ್ಚಿದ ಕಿವಿ ಹಣ್ಣುಗಳು
* ಅರ್ಧ ಹೆಚ್ಚಿದ ಅವಕಾಡೋ
* ಅರ್ಧ ಬಾಳೆಹಣ್ಣು
* ಸಣ್ಣ ತುಂಡು ಶುಂಠಿ

ಮಾಡುವ ವಿಧಾನ:
* ಮೊದಲಿಗೆ ಮಿಕ್ಸರ್‌ ಜಾರ್‌ಗೆ ಹಾಲು ಹಾಕಿ.
* ಅದಕ್ಕೆ ಆಪಲ್‌, ಕಿವಿ ಹಣ್ಣು, ಅವಕಾಡೋ, ಬಾಳೆ ಹಣ್ಣು ಸೇರಿಸಿ.
* ಅಂತಿಮವಾಗಿ ಶುಂಠಿ ಹಾಕಿ, ಬ್ಲೆಂಡ್‌ ಮಾಡಿ.
* ಮಿಶ್ರಣ ಮೃದುವಾದ ಸ್ಮೂಥಿ ರೀತಿಯ ಸ್ಥಿರತೆ ಬರುವವರೆಗೆ ಒಂದೆರಡು ನಿಮಿಷ ಬ್ಲೆಂಡ್‌ ಮಾಡಿ.
* ಇದೀಗ ಗ್ರೀನ್‌ ಸ್ಮೂಥಿ ತಯಾರಾಗಿದ್ದು, ತಕ್ಷಣವೇ ಬಡಿಸಿ.
* ಈ ಸ್ಮೂಥಿ ಅತ್ಯಂತ ರುಚಿಕರ, ಆರೋಗ್ಯಕರ, ರಿಫ್ರೆಶಿಂಗ್‌ ಆಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ : ಚುಮುಚುಮು ಚಳಿಗೆ ಬಿಸಿಬಿಸಿಯಾದ ಮಟರ್‌ ಕಚೋರಿ ಹೀಗೆ ಮಾಡಿ

ಹೆಚ್ಚಿನ ಸುದ್ದಿ

Change Language »
error: Content is protected !!