ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅರುಣಾ ಲಕ್ಷ್ಮಿ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ಬಂಜಾರ ಸಮುದಾಯದ ಉಡುಗೆ ತೊಟ್ಟು ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಪ್ರಚಾರ ಮಾಡಿದ್ದು, ಲಂಬಾಣಿ ಸಮುದಾಯ ಮುಖಂಡರು ಈ ವೇಳೆ ರೆಡ್ಡಿಗೆ ಬೆಳ್ಳಿ ಕಿರೀಟ ತೊಡಿಸಿದರು.
ಈಗಾಗಲೇ ಜನಾರ್ಧನ ರೆಡ್ಡಿ ಅವರ ಕೆಆರ್ಪಿಪಿ ಪಕ್ಷದಿಂದ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಜನಾರ್ದನ ರೆಡ್ಡಿ ತಿಳಿಸಿದ್ರು.
ಪ್ರಚಾರದ ನಡುವೆ ಜನಾರ್ದನ ರೆಡ್ಡಿ, ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ಅವರು ವಹಿಸಿಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ದತ್ತು ಸ್ವೀಕಾರ ಮಾಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ, ಈ ವಿಚಾರದಲ್ಲಿ ನನಗೆ ಸ್ಪಷ್ಟತೆಯಿದೆ. ನಾನು ಕೆಆರ್ಪಿಪಿಯಿಂದಲೇ ಚುನಾವಣೆ ಎದುರಿಸುತ್ತೇನೆ ಎಂದರು.